ADVERTISEMENT

‘ಕನ್ನಡದ ಬಗ್ಗೆ ಅಭಿಮಾನ, ಇತರ ಭಾಷೆಗಳ ಬಗ್ಗೆ ಗೌರವ ಇರಲಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 7:17 IST
Last Updated 3 ನವೆಂಬರ್ 2017, 7:17 IST
ಹೊನ್ನಾವರದಲ್ಲಿ ನಡೆಯುತ್ತಿರುವ ಕನ್ನಡ ಹಬ್ಬ ಕಾರ್ಯಕ್ರಮವನ್ನು ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಂಗಳವಾರ ಉದ್ಘಾಟಿಸಿದರು.
ಹೊನ್ನಾವರದಲ್ಲಿ ನಡೆಯುತ್ತಿರುವ ಕನ್ನಡ ಹಬ್ಬ ಕಾರ್ಯಕ್ರಮವನ್ನು ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಂಗಳವಾರ ಉದ್ಘಾಟಿಸಿದರು.   

ಹೊನ್ನಾವರ: ‘ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಜತೆಗೆ ಕನ್ನಡಿಗರು ಇತರ ಭಾಷೆಗಳ ಕುರಿತು ಗೌರವ ಭಾವನೆಯನ್ನು ಹೊಂದಬೇಕು’ ಎಂದು ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಲ್ಲಿಯ ಕನ್ನಡ ಅಭಿಮಾನಿ ಸಂಘ ಸಂಘಟಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತಿ, ಧರ್ಮದ ಎಲ್ಲೆ ಮೀರಿ ಕನ್ನಡ ಭಾಷೆಯ ಅಡಿಯಲ್ಲಿ ಒಗ್ಗೂಡಿರುವ ಸಂಘದ ಕಾರ್ಯಕರ್ತರ ಸೇವೆ ಶ್ಲಾಘನೀಯ’ ಎಂದು ಹೇಳಿದರುಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಮಾತನಾಡಿದರು.

ಸನ್ಮಾನ: ಭಾರತೀಯ ಸೇನೆಯ ನಿವೃತ್ತ ವೈದ್ಯಾಧಿಕಾರಿ ಡಾ.ವಿಜೇತ ನಾಯ್ಕ ಹಾಗೂ ನಿವೃತ್ತ ಯೋಧ ಅನಂತ ಮಡಿವಾಳರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಉದಯರಾಜ ಮೇಸ್ತ, ಗೌರವಾಧ್ಯಕ್ಷ ಜಿ.ಜಿ ಶಂಕರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.