ADVERTISEMENT

ಕೈಗಾ ಪರಮಾಣು ಘಟಕದ ಸ್ಥಾನಿಕ ನಿರ್ದೇಶಕ ಸ್ಥಾನಕ್ಕೆ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 8:40 IST
Last Updated 16 ಅಕ್ಟೋಬರ್ 2012, 8:40 IST

ಕಾರವಾರ: ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಸ್ಥಾನಿಕ ನಿರ್ದೇಶಕರಾಗಿ ಕನ್ನಡಿಗ ಎಚ್.ಎನ್.ಭಟ್ ನೇಮಕಗೊಂಡಿದ್ದು ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ. ನಿರ್ದೇಶಕರಾಗಿದ್ದ ಜೆ.ಪಿ.ಗುಪ್ತಾ ರಾಜಸ್ತಾನದ ರಾವತ್‌ಬಾಟಾ ಅಣು ವಿದ್ಯುತ್ ಸ್ಥಾವರಕ್ಕೆ ವರ್ಗಾವಣೆಗೊಂಡಿದ್ದರಿಂದ ಈ ಸ್ಥಾನ ತೆರವಾಗಿತ್ತು.

ಕೈಗಾ ಪರಮಾಣು ವಿದ್ಯುತ್ ಸ್ಥಾವರ ಪ್ರಾರಂಭವಾದ ನಂತರ ಕನ್ನಡಿಗರೊಬ್ಬರು ನಿರ್ದೇಶಕ ಸ್ಥಾನ ಅಲಂಕರಿಸುತ್ತಿರುವು ಇದೇ ಮೊದಲು. ಭಟ್ ಅವರು ಮೂಲತಃ ಕುಮಟಾ ತಾಲ್ಲೂಕಿನ ಮೂರುರಿನವರಾಗಿದ್ದಾರೆ.

ಭಟ್ ಅವರು ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ನಿರ್ವಹಣೆ ವಿಭಾಗದ ಹಿರಿಯ ಎಂಜಿನಿಯರ್ ಆಗಿ ಸೇವೆ ಆರಂಭಿಸಿದರು. ಬಳಿಕ ಸುಪ್ರಿಟೆಂಡೆಂಟ್, ಇನ್‌ಸ್ಟ್ರುಮೆಂಟ್ ವಿಭಾಗದಲ್ಲಿ ಹಿರಿಯ ಎಂಜಿನಿಯರ್, ಚೀಫ ಸುಪ್ರಿಟೆಂಡೆಂಟ್ ನಂತರ 1 ಮತ್ತು 2 ಘಟಕದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.