ADVERTISEMENT

ಚುನಾವಣೆ ಪ್ರಕ್ರಿಯೆ ನಿರಾತಂಕ: ಎಂ.ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 7:01 IST
Last Updated 22 ಏಪ್ರಿಲ್ 2013, 7:01 IST

ಕುಮಟಾ: `ಕುಮಟಾದಲ್ಲಿ ಮುಂದಿನ 15 ದಿನಗಳ ಚುನಾವಣಾ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ' ಎಂದು ಕ್ಷೇತ್ರಕ್ಕೆ ವೀಕ್ಷಕರಾಗಿ ಆಗಮಿಸಿರುವ ಎಂ. ಚಕ್ರವರ್ತಿ ವಿಶ್ವಾಸ ವ್ಯಕ್ತಪಡಿಸಿದರು.

`ವೀಕ್ಷಕರ ಹೊರತಾಗಿ ಕೇರಳದ ಹಿರಿಯ ಐಪಿಎಸ್ ಅಧಿಕಾರಿ ಸಂಜಯಕುಮಾರ ವರ್ಮಾ ಪೊಲೀಸ್ ವೀಕ್ಷಕರಾಗಿ ಆಗಮಿಸಿದ್ದಾರೆ. ಕೇರಳದ ಐಆರ್‌ಎಸ್ ಅಧಿಕಾರಿ ಬಿಪಿನ್ ಖರ್ಚು- ವೆಚ್ಚಗಳ ವೀಕ್ಷಕರಾಗಿ ಆಗಮಿಸಿದ್ದು, ಮೊದಲ ಸುತ್ತಿನ ಸಭೆ ನಡೆಸಿದ್ದಾರೆ.

ಕುಮಟಾದಲ್ಲಿ ಅನುಮತಿ ಇಲ್ಲದೆ ಊಟ, ತಿಂಡಿ ವಿತರಿಸಿದ ಪ್ರಕರಣವೊಂದು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಕುಮಟಾದಲ್ಲಿ ಕೆ.ಎನ್. ಶ್ರೀನಿವಾಸ (ಮೊಬೈಲ್ ನಂ. 9845312051), ಲೋಕೇಶ ಎಂ. (ಮೊಬೈಲ್ ನಂ. 9916279471) ಹಾಗೂ ಶಿವಕುಮಾರಯ್ಯ (ಮೊಬೈಲ್ ನಂ. 948182197) ಸೆಕ್ಟರ್ ಅಧಿಕಾರಿಗಳಾಗಿದ್ದಾರೆ.

ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಅವರ ಮೊಬೈಲ್ ನಂಬರುಗಳ ಮೂಲಕ ದೂರು ಸಲ್ಲಿಸಬಹುದಾಗಿದೆ' ಎಂದರು. ಪ್ರೊಬೇಶನರಿ ಐಎಎಸ್ ಅಧಿಕಾರಿ ಡಾ. ರಾಗಪ್ರಿಯಾ, ತಹಶೀಲ್ದಾರ್ ಪ್ರಕಾಶ ಗಿಜ್ಜಿ ಹಾಗೂ ಇಒ ಉದಯ ನಾಯ್ಕ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.