ADVERTISEMENT

ನಾಯಿಗೆ ಬೆದರಿ ದಾರಿ ತಪ್ಪಿದ ಕಾಡುಕುರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 5:30 IST
Last Updated 14 ಆಗಸ್ಟ್ 2012, 5:30 IST
ನಾಯಿಗೆ ಬೆದರಿ ದಾರಿ ತಪ್ಪಿದ ಕಾಡುಕುರಿ
ನಾಯಿಗೆ ಬೆದರಿ ದಾರಿ ತಪ್ಪಿದ ಕಾಡುಕುರಿ   

ಮುಂಡಗೋಡ: ನಾಯಿ ದಾಳಿಯಿಂದ ತಪ್ಪಿಸಿಕೊಂಡ ಕಾಡು ಕುರಿಯೊಂದು ದೇವಸ್ಥಾನದ ಸನಿಹ ಆಶ್ರಯ ಪಡೆದಿರುವು ದನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಪಟ್ಟಣದ ಪಾರ್ವತಿ-ಪರಮೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಕಾಡುಕುರಿಯ ಬೆನ್ನಿನ ಮೇಲೆ ಗಾಯದ ಗುರುತುಗಳಿರು ವುದು ಕಂಡು ಬಂದಿದ್ದು ನಾಯಿ ದಾಳಿ ಮಾಡಿರಬಹುದು ಎನ್ನ ಲಾಗಿದೆ. ಆಹಾರ ಅರಸುತ್ತ ನಾಡಿನೆಡೆಗೆ ಬಂದ ಕಾಡುಕುರಿ ನಾಯಿ ದಾಳಿಯಿಂದ ತಪ್ಪಿಸಿಕೊಂಡು ಚಿಕಿತ್ಸೆಯಲ್ಲಿ ಚೇತರಿಸಿ ಕೊಳ್ಳುತ್ತಿದೆ. ಅರಣ್ಯ ಇಲಾಖೆಯವರು ಚಿಕಿತ್ಸೆ ನೀಡಿ ದಾಂಡೇಲಿ ಅರಣ್ಯಕ್ಕೆ ಕಳಿಸಿಕೊಟ್ಟಿದ್ದಾರೆ.

ಕಳೆದ ಕೆಲ ತಿಂಗಳುಗಳ ಹಿಂದೆ ಕಾಡು ಕುರಿಯೊಂದು ಗಾಯಗೊಂಡು ರಸ್ತೆ ಸನಿಹ ಸಿಕ್ಕಿದ್ದಾಗ ಅದಕ್ಕೆ ಚಿಕಿತ್ಸೆ ನೀಡಿ ಮತ್ತೆ ಅರಣ್ಯಕ್ಕೆ  ಬಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.