ADVERTISEMENT

ಬಾವಿಗೆ ಬಿದ್ದ ಚಿರತೆ: ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 9:15 IST
Last Updated 11 ಸೆಪ್ಟೆಂಬರ್ 2013, 9:15 IST
ಕಾರವಾರ ತಾಲ್ಲೂಕಿನ ಆಮ್ಲೆಯಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಮೇಲೆತ್ತಲು ಬಾವಿಗೆ ಏಣಿ ಹಾಕಿರುವುದು.
ಕಾರವಾರ ತಾಲ್ಲೂಕಿನ ಆಮ್ಲೆಯಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಮೇಲೆತ್ತಲು ಬಾವಿಗೆ ಏಣಿ ಹಾಕಿರುವುದು.   

ಕಾರವಾರ: ಆಹಾರ ಅರಸಿ ಬಂದ ಚಿರತೆಯೊಂದು ಬಾವಿಯಲ್ಲಿ ಬಿದ್ದು, ಏಣಿ ಸಹಾಯದಿಂದ ಕಾಡಿಗೆ ಮರಳಿದ ಘಟನೆ ತಾಲ್ಲೂಕಿನ ಗೋಪಶಿಟ್ಟಾ ಸಮೀಪದ ಆಮ್ಲೆಯಲ್ಲಿ ಮಂಗಳವಾರ ನಡೆದಿದೆ.

ಮಾಳಸಾ ತಳವೇಕರ ಎನ್ನುವವರ ಮನೆಯ ಹಿಂದಿನ ಬಾವಿಯಲ್ಲಿ ಚಿರತೆ ಬಿದ್ದಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಮೇಲೆತ್ತಲು ಹರಸಾಹಸ ಪಟ್ಟರು. ಬಳಿಕ ಅಗ್ನಿಶಾಮಕದಳದ ಸಹಕಾರ ಕೋರಲಾಯಿತು.

ಚಿರತೆಯನ್ನು ನೋಡಲು ಬಾವಿಯ ಸುತ್ತಲೂ ಜನರು ನಿಂತಿದ್ದರಿಂದ ಚಿರತೆ ಹೆದರಿತ್ತು. ಕೊನೆಗೆ ಅದನ್ನು ಮೇಲೆತ್ತಲು ಸಾಧ್ಯವಾಗದೇ ಇದ್ದಾಗ ಬಾವಿಗೆ ಏಣಿ ಹಾಕಿ ಇಡಲಾಯಿತು. ಕೆಲ ಸಮಯದ ಬಳಿಕ ಚಿರತೆ ಬಾವಿಯಿಂದ ಎದ್ದು ಮರಳಿ ಕಾಡು ಸೇರಿದೆ ಎಂದು ಎಸಿಎಪ್‌ ಮೋಹನ ಕಣಗಿಲ್‌ ’ಪ್ರಜಾವಾಣಿ’ಗೆ ತಿಳಿಸಿದರು. ಚಿತ್ತಾಕುಲ ಪೊಲೀಸ್‌ರು ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.