ADVERTISEMENT

ಶರಾವತಿ ನದಿ ಶ್ರೀರಾಮನ ಕರುಣೆಯ ಪ್ರತೀಕ: ರಾಘವೇಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:21 IST
Last Updated 24 ನವೆಂಬರ್ 2017, 8:21 IST

ಹೊನ್ನಾವರ: ‘ಸೀತಾಮಾತೆಯ ದಾಹ ತಣಿಸಲು ಶ್ರೀರಾಮ ತನ್ನ ಶರಧಿಯನ್ನು ಪ್ರಯೋಗಿಸಿದಾಗ ಉದ್ಭವಿಸಿದ ಶರಾವತಿ ನದಿ ಶ್ರೀರಾಮನ ಕರುಣೆಯ ಪ್ರತೀಕ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗೇರುಸೊಪ್ಪದಲ್ಲಿ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ‘ಕರುಣಾಸಾಗರನಾದ ಶ್ರೀರಾಮನ ದಯೆಯಿಂದ ಶರಾವತಿ ನದಿ ಪ್ರಧಾನ ಮಠ ಹೊಸನಗರದಿಂದ ಹೊನ್ನಾವರದವರೆಗೆ ಹರಿದು ಬಂದಿದೆ’ ಎಂದು ಹೇಳಿದರು.

‘ಅಪ್ಸರಕೊಂಡ ಮಠ ಹಾಗೂ ಹವ್ಯಕರ ಮೂಲಸ್ಥಾನವಾದ ಹೈಗುಂದದ ಅಭಿವೃದ್ಧಿಯಲ್ಲಿ ಭಕ್ತರು ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು. ಪಿ.ಎಸ್.ಭಟ್ ಉಪ್ಪೋಣಿ, ಮಾನ್ಯ ಸುಬ್ರಾಯ ಹೆಗಡೆ, ವಿದ್ಯಾವಾಹಿನಿ ಮಹಾಮಂಡಲ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ಕೆ.ಜಿ.ಹೆಗಡೆ, ಹೈಗುಂದ, ವಲಯಾಧ್ಯಕ್ಷ ಎಲ್.ಎಸ್.ಹೆಗಡೆ, ಗಾಳಿ ಉಪಸ್ಥಿತರಿದ್ದರು. ಮೂಡ್ಕಣಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿ ಭೇಟಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.