ADVERTISEMENT

ಸೃಜನಶೀಲತೆ ನಾಶ: ಕಂಬಾರ ವಿಷಾದ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 7:40 IST
Last Updated 13 ಫೆಬ್ರುವರಿ 2012, 7:40 IST

ಶಿರಸಿ: `ನಾವು ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವ ಧಾವಂತದಲ್ಲಿ ಅವರ ಸೃಜನಶೀಲತೆಗೆ ಏಟು ಹಾಕುತ್ತಿದ್ದೇವೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಅವರು ನಗರದ ಎಂಇಎಸ್ ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿ ಯಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಂಟು ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದ ನಂತರ ಸಭೆ ಉದ್ದೇಶಿಸಿ ಮಾತನಾಡಿದರು.

ಇಂಗ್ಲಿಷ್  ವ್ಯಾಮೋಹ ಬೆಳೆಸಿ ಕೊಂಡ ಯುವಜನತೆ ಪದವಿ ಶಿಕ್ಷಣ ಪಡೆದು ಶಿಕ್ಷಣಕ್ಕೆ ತಕ್ಕ ಕೆಲಸ ಬೇಕು ಎಂಬ ಮನಸ್ಥಿತಿ ಬೆಳೆಸಿಕೊಳ್ಳುತ್ತಿದೆ. ಹಾಗಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕಾರ್ಯವಾಗು ತ್ತಿಲ್ಲ. ಇಂಗ್ಲಿಷರು ನಮ್ಮ ಪ್ರಶ್ನಿಸುವ ಮನೋಭಾವವನ್ನೇ ನಾಶ ಮಡಿದ್ದಾರೆ ಎಂದರು. 

ಮಕ್ಕಳಲ್ಲಿ ಸೃಜನಶೀಲತೆ ಕಳೆದು ಹೋಗುತ್ತಿದೆ. ಪ್ರಾಣಿ, ಪಕ್ಷಿ, ಮರಗಳ ಹೆಸರು ಕನ್ನಡ ಭಾಷೆಯಲ್ಲಿ ಗೊತ್ತಿಲ್ಲ. ಜಾನಪದವಂತೂ ಗೊತ್ತೇ ಇಲ್ಲ. ಮಕ್ಕಳಲ್ಲಿ ಇಂಗ್ಲಿಷ್ ತುಂಬಿ ಯಾರನ್ನು ಉದ್ಧಾರ ಮಾಡಲಾಗುತ್ತಿ ದೆಯೋ ಗೊತ್ತಿಲ್ಲ. ಇಂಗ್ಲೀಷ್ ಭಾಷೆ ಕಲಿತರೆ ಜಗತ್ತಿನ ಎಲ್ಲಿ ಬೇಕಾದರೂ ಉದ್ಯೋಗ ಮಾಡಬಹುದು ಎಂಬ ಭ್ರಮೆಯಲ್ಲಿ ಜನರಿದ್ದಾರೆ ಎಂದು ಅವರು ಹೇಳಿದರು.

ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಈ ರೀತಿಯ ಪರ್ಯಾಯ ಇಂದಿನ ಅಗತ್ಯ ವಾಗಿದೆ ಎಂದು ಅವರು ಶ್ಲಾಘಿಸಿದರು. ಗಾಂಧಿ ವಾದಿ ಯಶವಂತ ಹೆರವಟ್ಟಾ, ನಿವೃತ್ತ ಶಿಕ್ಷಕ ಆರ್.ಜಿ ರಾಯಕರ, ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶರಾವ್, ಶಿಕ್ಷಣ ತಜ್ಞ ವಿ.ಎಸ್.ಸೋಂದೆ, ಅಂಕಣಕಾರ ಎಸ್. ವಿ ನಾಯ್ಕ, ಪ್ರಗತಿಪರ ಕೃಷಿಕ ಅಬ್ದುಲ್ ರವೂಫ್ ಶೇಖ, ಹಿಂದೂಸ್ತಾನಿ ಗಾಯಕ ಪಂಡಿತ ಗಣಪತಿ ಭಟ್ಟ ಹಾಸಣಗಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾ ಯಿತು.

ಪ್ರಶಸ್ತಿ ಸ್ವೀಕರಿಸಿ  ಗಾಯಕ ಪಂ.ಗಣಪತಿ ಭಟ್ಟ ಹಾಸಣಗಿ ಮಾತ ನಾಡಿದರು. ವೈದ್ಯ ಡಾ.ಮೋಹನ ಪಾಟೀಲ, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪುರಸ್ಕೃತ ಸಂದೇಶ ಹೆಗಡೆ, ಕ್ರೀಡಾಪಟು ಕಾಶಿ ನಾಥ ನಾಯ್ಕ, ಕವಿ ಫಾಲ್ಗುಣ ಗೌಡ, ಕುಸ್ತಿಪಟು ಶರೀಫ್ ಜಮಾ ದಾರ್, ಮಹಿಳಾ ಸಾಧಕಿ ಓಮಿ ಠೀಕ್ರು ಮರಾಠೆ ಅವರನ್ನು ಸನ್ಮಾನಿಸಲಾ ಯಿತು. ವಿ.ಆರ್.ದೇಶಪಾಂಡೆ ಟ್ರಸ್ಟ್‌ನ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಟ್ರಸ್ಟಿ ಪ್ರಶಾಂತ ದೇಶಪಾಂಡೆ, ಜಿಪಂ ಅಧ್ಯಕ್ಷೆ ಸುಮಾ ಲಮಾಣಿ, ಉಪಾಧ್ಯಕ್ಷ ಉದಯ ನಾಯ್ಕ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.