ADVERTISEMENT

ಗೋವಾದ ಕಾನ್‍ಕೊಲಿಮ್ ಸಮೀಪ ಅಪಘಾತ: ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 10:01 IST
Last Updated 20 ಏಪ್ರಿಲ್ 2019, 10:01 IST
   

ಕಾರವಾರ: ಲಾರಿ ಮತ್ತು ಕಾರಿನ ನಡುವೆ ಶನಿವಾರ ನಡೆದ ಅಪಘಾತದಲ್ಲಿ ಕಾರವಾರದ ನಾಲ್ವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ಗೋವಾದ ಕಾನ್‍ಕೊಲಿಮ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತಿ, ಪತ್ನಿ, ಆರು ತಿಂಗಳ ಮಗು ಮತ್ತು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಯಾರೆಂದು ತಿಳಿದುಬರಬೇಕಿದೆ.

ಗೋವಾ ವಿಮಾನ ನಿಲ್ದಾಣದಿಂದ ಕಾರವಾರಕ್ಕೆ ಬರುತ್ತಿರುವಾಗ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಲಾರಿ ರಸ್ತೆ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಕಾರಿನ (ಕೆಎ02-ಎಂ.ಡಿ 8957) ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ADVERTISEMENT

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ. ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.