ADVERTISEMENT

ಧರ್ಮ ರಕ್ಷಣೆಗೆ ಕೇಸರಿ ಬಾವುಟ, ನಾಮ ಸಾಲದು

ಕುಮಟಾ: ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 14:44 IST
Last Updated 18 ಏಪ್ರಿಲ್ 2019, 14:44 IST
   

ಕುಮಟಾ: ‘ಸಂಸದ ಅನಂತಕುಮಾರ ಹೆಗಡೆ ಒಂದೊಂದು ಸಲ ಒಂದೊಂದು ಅಲೆಯಲ್ಲಿ ಆರಿಸಿ ಬಂದರು. ಆದರೆ, ಕ್ಷೇತ್ರಕ್ಕೆ ಯಾವತ್ತೂ ಏನೂ ಮಾಡಿಲ್ಲ. ಚುನಾವಣೆ ಬಂದಾಗ ಇತ್ತ ಮುಖ ಮಾಡ್ತಾರೆ. ನಂತರ ಕಾಣಿಸಿಕೊಳ್ಳುವುದಿಲ್ಲ’ ಎಂದು ಮೈತ್ರಿಕೂಟದಅಭ್ಯರ್ಥಿ ಆನಂದ ಅಸ್ನೋಟಿಕರ್ ಟೀಕಿಸಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಅನಂತಕುಮಾರ ಹೆಗಡೆ ಹಿಂದೂ ಧರ್ಮದ ರಕ್ಷಕ ಎಂದು ಹೇಳುತ್ತಾನೆ. ಆದರೆ, ಇಂತಹ ಅವಿವೇಕಿ ಸಂಸದನಿಂದಾಗಿ ಬಡವರುಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ಇಂತಹವರಿಂದ ಧರ್ಮ ಒಡೆಯುವ ಕೆಲಸ ಆಗಿದೆ. ಯಾವುದೇ ಧರ್ಮ ಉದ್ಧಾರ ಆಗಬೇಕಾದರೆ ಯುವಕರಿಗೆ ಉದ್ಯೋಗ ಕೊಡಬೇಕು. ಕೇವಲಕೇಸರಿ ಬಾವುಟಹಾಗೂ ನಾಮದಿಂದ ಧರ್ಮದ ರಕ್ಷಣೆಯಾಗದು’ ಎಂದು ಪ್ರತಿಪಾದಿಸಿದರು.

ಮುಖಂಡ ಶಶಿಭೂಷಣ ಹೆಗಡೆ ಮಾತನಾಡಿ, ‘ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಬ್ಬ ಸಂಸದರಿಗೆ, ಒಂದು ಸಂಸದ ಕ್ಷೇತ್ರಕ್ಕೆ ಎಷ್ಟು ಮಹತ್ವ ಇರುತ್ತದೆ ಎನ್ನುದು ಗೊತ್ತೇ ಇಲ್ಲ’ ಎಂದರು.

ADVERTISEMENT

‘ಚಕಾರವೆತ್ತದ ಸ್ವಾಮೀಜಿಗಳಿಗೆ ಧಿಕ್ಕಾರ’:‘ಸಂಸ್ಕೃತಿ ಮರೆತು ನಾಲಿಗೆ ಹರಿಬಿಡುವ ಸಂಸದ ಅನಂತಕುಮಾರ ಹೆಗೆಡೆ ವಿರುದ್ಧ ನಾಡಿನ ಯಾವ ಸ್ವಾಮೀಜಿಗಳೂ ಚಕಾರ ಎತ್ತದಿರುವುದುಆಶ್ಚರ್ಯ ತಂದಿದೆ.ಮೌನ ವಹಿಸಿದಅವರಿಗೆಲ್ಲ ಧಿಕ್ಕಾರವಿರಲಿ’ ಎಂದುಮುಖಂಡಆರ್.ಎನ್.ನಾಯ್ಕ ಹೇಳಿದರು.

‘ಅನಂತಕುಮಾರ ಹೆಗಡೆ ವೈದ್ಯರಿಗೆ ಹೊಡೆದಾಗ, ಮುಸ್ಲಿಮರಿಗೆ ಬೈದಾಗ ಆತನ ವಿರುದ್ಧ ಜನರು ಪ್ರತಿಭಟನೆ ಮಾಡಬೇಕಿತ್ತು. ಈಗ ಆತನನ್ನು ಸೋಲಿಸಿ ಮನೆಯಲ್ಲಿ ಕುಳ್ಳಿರಿಸಿದರೆ ಬುದ್ಧಿ ಬರುತ್ತದೆ’ಎಂದರು.

ವಿಧಾನ‍ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖಂಡರಾದ ಭಟ್ಕಳದ ಇನಾಯತ್ ಉಲ್ಲಾ ಶಾಬಂದ್ರಿ, ಶಾರದಾ ಶೆಟ್ಟಿ, ಸೂರಜ್ ನಾಯ್ಕ, ಆರ್.ಎಚ್.ನಾಯ್ಕ, ಜಗದೀಪ ತೆಂಗೇರಿ ಮಾತನಾಡಿದರು.

ಮುಖಂಡರಾದ ಎಚ್.ಕೋನರೆಡ್ಡಿ, ಗಜು ನಾಯ್ಕ, ಮೋಹಿನಿ ನಾಯ್ಕ, ಕೆ.ಎಚ್.ಗೌಡ, ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ಗಣಪಯ್ಯ ಗೌಡ, ಶಂಭು ಗೌಡ, ವಿ.ಎಲ್.ನಾಯ್ಕ, ರತ್ನಾಕರ ನಾಯ್ಕ, ಮಂಜು ಪಟಗಾರ, ವಿಜಯಾ ಪಟಗಾರ, ಸುಜಾತಾ ಗಾಂವ್ಕರ್ ಇದ್ದರು.

ನೋಗಲೆ ಫ್ರೈ, ಬೆಳಚಿನ ಬಾಜಿ ಸವಿದ ಸಿ.ಎಂ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮದ ನಂತರ ಕಾಂಗ್ರೆಸ್ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರು. ಊಟದಲ್ಲಿ ನೋಗಲೆ, ಸಿಗಡಿ ಫ್ರೈ, ಬೆಳಚಿನ ಸುಕ್ಕ, ಕಲಗದ ಬಾಜಿ ಸವಿದರು. ನಂತರ ದೀವಗಿಗೆ ತೆರಳಿ ನಿರ್ಮಾಣ ಹಂತದಲ್ಲಿರುವ ಹಾಲಕ್ಕಿ ಒಕ್ಕಲು ಸಮಾಜದ ಸಭಾಭವನ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.