ADVERTISEMENT

ಭಟ್ಕಳ | ಮೌಲ್ಯಯುತ ಶಿಕ್ಷಣ ಅವಶ್ಯ: ಗೋಪಾಲಕೃಷ್ಣ ಹೆಗಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:30 IST
Last Updated 20 ಜೂನ್ 2025, 14:30 IST
ಭಟ್ಕಳ ಪ್ರಥಮ ದರ್ಜೇ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ಉದ್ಘಾಟಿಸಿದರು
ಭಟ್ಕಳ ಪ್ರಥಮ ದರ್ಜೇ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ಉದ್ಘಾಟಿಸಿದರು   

ಭಟ್ಕಳ: ಬದುಕು ಕಟ್ಟುವ ಮೌಲ್ಯದ ಶಿಕ್ಷಣದ ಅವಶ್ಯಕತೆ ಇದೆ ಎಂದು ಶಿರಾಲಿಯ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ಹೇಳಿದರು.

ಅವರು ಇತ್ತೀಚಿಗೆ ಜಾಲಿಯ ವೆಂಕಟೇಶ್ವರ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಹಾಗೂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳು ಗುರುಗಳಿಂದ ಮೌಲ್ಯಯುತವಾದ ವಿದ್ಯೆಯನ್ನು ಸಂಪಾದಿಸುವ ಅಗತ್ಯವಿದೆ ಎಂದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಮಾತನಾಡಿ, ಕಾಲೇಜಿನ ಸೌಲಭ್ಯಗಳು ಎಲ್ಲ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಹಾಗೂ ಸಚಿವ ಮಂಕಾಳ ವೈದ್ಯ ಅವರು ಕಾಲೇಜಿನ ಕಟ್ಟಡಕ್ಕೆ ₹ 1.5 ಕೋಟಿ ಅನುದಾನವನ್ನು ತಂದಿದ್ದು ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾಲೇಜನ್ನಾಗಿ ರೂಪಿಸಬಹುದೆಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ ಗೊಂಡ, ಸೋಮಯ್ಯ ಗೊಂಡ, ಮಂಜಪ್ಪ ನಾಯ್ಕ ಜಾಲಿ, ರಮೇಶ ನಾಯ್ಕ ಹುರುಳಿಸಾಲ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.