ADVERTISEMENT

ರೈಲು ಯೋಜನೆ: ಕೇಂದ್ರ ತಂಡದಿಂದ ‘ಗಜಪಥ’ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 16:02 IST
Last Updated 28 ಸೆಪ್ಟೆಂಬರ್ 2022, 16:02 IST
ಕೇಂದ್ರ ಸರ್ಕಾರದ ಪರಿಶೀಲನಾ ತಂಡದ ಸದಸ್ಯರು ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಭಾಗದಲ್ಲಿ ಬುಧವಾರ ಸ್ಥಳ ಪರಿಶೀಲನ ನಡೆಸಿದರು
ಕೇಂದ್ರ ಸರ್ಕಾರದ ಪರಿಶೀಲನಾ ತಂಡದ ಸದಸ್ಯರು ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಭಾಗದಲ್ಲಿ ಬುಧವಾರ ಸ್ಥಳ ಪರಿಶೀಲನ ನಡೆಸಿದರು   

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಪ್ರದೇಶಕ್ಕೆ ಕೇಂದ್ರದ ತಂಡದವರು ಬುಧವಾರ ಭೇಟಿ ನೀಡಿದರು. ಅಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಡೊಮಗೇರಿ, ಅಲ್ಕೇರಿ ಗೌಳಿವಾಡದ ಸಮೀಪದ ಪ್ರದೇಶಕ್ಕೆ ತೆರಳಿ, ‘ಗಜಪಥ’ವನ್ನು ಪರಿಶೀಲಿಸಿದರು. ಈ ಭಾಗದಲ್ಲಿ ಸಂಚರಿಸುವ ಆನೆಗಳ ಸುರಕ್ಷತೆಗೆ ತೆಗೆದುಕೊಳ್ಳಬಹುದಾದ ಮಾರ್ಗೋಪಾಯಗಳನ್ನು ಪರಿಶೀಲಿಸಿತು. ಕಿರವತ್ತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ 13.8 ಕಿಲೋಮೀಟರ್ ರೈಲ್ವೆ ಮಾರ್ಗ ಇರಲಿದೆ. ಇದರಲ್ಲಿ ಸುಮಾರು 8 ಕಿಲೋಮೀಟರ್ ಪ್ರದೇಶದಲ್ಲಿ ಗಜಪಥವಿದೆ.

4 ಕಿಲೋಮಿಟರ್ ದಿಬ್ಬ ಹಾಗೂ 4 ಕಿಲೋಮೀಟರ್ ಅಗಳವನ್ನು ತೋಡಿ ಅದರಲ್ಲಿ ಹಳಿ ಹಾಕಲು ಉದ್ದೇಶಿಸ
ಲಾಗಿದೆ. ಈ ಮೂಲಕ ಆನೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದ ಎ.ಇ.ಇ ರಾಜೀವ ನಾಯಕ ತಂಡಕ್ಕೆ ವಿವರಿಸಿದರು.

ADVERTISEMENT

ಮುಖ್ಯ ಅರಣ್ಯ ಸಂರಕ್ಷಣಾ ಸಂರಕ್ಷಣಾಧಿಕಾರಿ (ವನ್ಯ ಜೀವಿ) ವಿಜಯಕುಮಾರ ಗೋಗಿ, ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಶಿರಸಿ ಉಪ ವಿಭಾಗಾಧಿಕಾರಿ ದೇವರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ, ಗ್ರೇಡ್ 2 ತಹಶೀಲ್ದಾರ್ ಸಿ.ಜಿ.ನಾಯ್ಕ, ಆರ್.ಎಫ್.ಒ ಮಿರ್ಜಾನಕರ್ ಹಾಗೂ ನೈರುತ್ಯ ರೈಲ್ವೇ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.