ADVERTISEMENT

ಜೊಯಿಡಾ: ಭಕ್ತರ ಜೈಕಾರದ ನಡುವೆ ಉಳವಿ ರಥೋತ್ಸವ

ಮೊಳಗಿದ ‘ಅಡಿಕೇಶ್ವರ ಮಡಿಕೇಶ್ವರ, ಉಳವಿ ಚೆನ್ನಬಸವೇಶ್ವರ ಮಹಾರಾಜ ಕೀ ಜೈ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:47 IST
Last Updated 10 ಫೆಬ್ರುವರಿ 2020, 12:47 IST
ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನೆರವೇರಿತು
ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನೆರವೇರಿತು   

ಜೊಯಿಡಾ: ‘ಅಡಿಕೇಶ್ವರ ಮಡಿಕೇಶ್ವರ... ಉಳವಿ ಚೆನ್ನಬಸವೇಶ್ವರ ಮಹಾರಾಜ ಕೀ ಜೈ’ ಎನ್ನುತ್ತಾಸಾವಿರಾರುಭಕ್ತರು ಬಾಳೆಹಣ್ಣು, ಉತ್ತತ್ತಿ, ಎಸೆದರು. ಜೊತೆಗೇಜಯಘೋಷ ಕೂಗುತ್ತ ತೇರನ್ನು ಎಳೆದರು. ಇದರೊಂದಿಗೆ ಉಳವಿಯಲ್ಲಿ ಚನ್ನಬಸವೇಶ್ವರರಥೋತ್ಸವವುಸೋಮವಾರ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದ ರಥಬೀದಿಯಲ್ಲಿ ಸಾವಿರಾರು ಭಕ್ತರು ರಥ ಎಳೆಯುವ ಹಗ್ಗಕ್ಕೆ ಕೈಜೋಡಿಸಿದರು. ಶಾಸಕ ಆರ್.ವಿ.ದೇಶಪಾಂಡೆ, ಉಳವಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ ಮತ್ತು ಆಡಳಿತ ಮಂಡಳಿಯವರು ಮಹಾರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಭಕ್ತರೊಂದಿಗೆ ರಥ ಎಳೆದು ಉತ್ಸವಕ್ಕೆಚಾಲನೆ ನೀಡಿದರು.

ತೇರನ್ನು ರಥಬೀದಿಯಿಂದ ವೀರಭದ್ರ ದೇವಸ್ಥಾನದವರೆಗೂ ಎಳೆದು ಪುನಃ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದವರೆಗೆ ತಂದು ನಿಲ್ಲಿಸಲಾಯಿತು.ಇದರೊಂದಿಗೆ ಮಹಾರಥೋತ್ಸವ ಸಂಪನ್ನವಾಯಿತು.

ರಥಬೀದಿಯ ಉದ್ದಗಲಕ್ಕೂ ಫಲಪುಷ್ಪ, ತೆಂಗಿನಕಾಯಿಗಳ ಅಂಗಡಿಗಳು, ವಿಭೂತಿ ಗಟ್ಟಿಗಳ, ಕುಂಕುಮ, ದೇವರ ಚಿತ್ರಗಳಿರುವ ಹಾರಗಳು, ಕಂಕಣಗಳು, ಫೋಟೊಗಳು, ಬೆತ್ತದ ಬುಟ್ಟಿಗಳು, ಮಕ್ಕಳ ಆಟಿಕೆಯ ಅಂಗಡಿಗಳು ಜಾತ್ರೆಯ ವಾತಾವರಣಕ್ಕೆ ಮೆರುಗು ನೀಡಿದ್ದವು.

ADVERTISEMENT

ಭಕ್ತರಿಗೆ ದಾಸೋಹ

ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಗೆ ಬಂದಭಕ್ತರಿಗೆ ಅನ್ನದಾಸೋಹವನ್ನು ಉಳವಿ ಚನ್ನಬಸವೇಶ್ವರ ಸಮಿತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ವಿವಿಧ ಭಾಗಗಳಿಂದ ಬಂದ ದಾನಿಗಳಿಂದಲೂ 15– 20 ಕಡೆಗಳಲ್ಲಿದಾಸೋಹ ಸೇವೆಗಳನ್ನು ಆಯೋಜಿಸಲಾಗಿತ್ತು. ಹೆಣಕೊಳ, ಪೊಟೊಲಿ ಸಮಿಪದ ಕಾಂಡಾಕುಂಡಿ, ಚಾಪೇರ ಹತ್ತಿರ, ಶಿವಪುರ ಮತ್ತು ಯಲ್ಲಾಪುರದ ಗಣೇಶಗುಡಿಯಲ್ಲಿಯೂ ಭಕ್ತರು ದೇವಸ್ಥಾನಕ್ಕೆ ಬಂದ ಪಾದಯಾತ್ರಿಗಳಿಗೆ ಊಟೋಪಚಾರ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೊಟ್ನೇಕರ್, ಉಳವಿ ದೇವಸ್ಥಾನ ಟ್ರಸ್ಟ್ ಸಮಿತಿ ಸದಸ್ಯರಾದ ಬಿ.ಸಿ.ಉಮಾಪತಿ, ಗಣಪತಿ ಉಳ್ವೇಕರ್, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ತಹಶೀಲ್ದಾರ್ಸಂಜಯ ಕಾಂಬ್ಳೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮೊಕಾಶಿ, ಉಪಾಧ್ಯಕ್ಷೆ ಲಲಿತಾ ದಾತೋಡಕರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.