ADVERTISEMENT

ಮಳೆ | ಕೊಂಕಣ ರೈಲ್ವೆ ಮಾರ್ಗದ ನಾಲ್ಕು ರೈಲುಗಳ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 15:02 IST
Last Updated 5 ಆಗಸ್ಟ್ 2019, 15:02 IST
   

ಕಾರವಾರ:ಮುಂಬೈಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೇಂದ್ರೀಯ ರೈಲ್ವೆಯಮುಂಬೈ ವಿಭಾಗದಲ್ಲಿ ರೈಲು ಹಳಿಗಳ ಮೇಲೆ ಬಂಡೆ ಉರುಳಿದೆ.ಆದ್ದರಿಂದಕೊಂಕಣ ರೈಲ್ವೆ ಮಾರ್ಗದ ಕೆಲವು ರೈಲುಗಳ ಸಂಚಾರ ರದ್ದಾಗಿದೆ.

ಮಂಗಳವಾರ ಸಂಚರಿಸಬೇಕಿದ್ದ ಎರ್ನಾಕುಲಂ– ಪುಣೆ ನಡುವೆ ‘ಪೂರ್ಣಾ ಎಕ್ಸ್‌ಪ್ರೆಸ್’ (22149)ಹಾಗೂ ಬುಧವಾರ ಸಂಚರಿಸಬೇಕಿದ್ದ ಕುರ್ಲಾ– ತಿರುವನಂತಪುರಂ ನಡುವಿನ ‘ನೇತ್ರಾವತಿ ಎಕ್ಸ್‌ಪ್ರೆಸ್’ (16345) ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ.

ಸೋಮವಾರ ಸಂಚರಿಸಬೇಕಿದ್ದ ತಿರುನಲ್ವೇಲಿ– ಜಾಮ್‌ನಗರ್ ನಡುವಿನ ‘ಜಾಮ್‌ನಗರ್ ಎಕ್ಸ್‌ಪ್ರೆಸ್’ (19577), ಕೊಚುವೇಲಿ– ಚಂಡೀಗಡ ನಡುವಿನ ‘ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್’ (12217) ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ.

ADVERTISEMENT

ಎರ್ನಾಕುಲಂ– ನಿಜಾಮುದ್ದೀನ್ ನಡುವಿನ ‘ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್’ (12617) ರೈಲನ್ನು ತ್ರಿಶೂರು, ಶೊರ್ನೂರು, ಪಾಲ್ಗಾಟ್, ಸೇಲಂ, ಜೋಲಾರ್‌ಪೇಟೆ,ರೇನುಗುಟ್ಟ ಮೂಲಕ ಕಳುಹಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.