ADVERTISEMENT

ನದಿ ನೆರೆ ಮಾಹಿತಿಗೆ ‘ಜಿಯೊ ಟ್ಯಾಗಿಂಗ್‌’ ಮೊರೆ ಹೋದ ಉತ್ತರ ಕನ್ನಡ ಜಿ.ಪಂ

ಆರು ತಿಂಗಳ ಅಧ್ಯಯನ ಬಳಿಕ ಜಿ.ಪಂ, ಎನ್.ಆರ್.ಡಿ.ಎಂ.ಎಸ್‌.ನಿಂದ ಕಾರ್ಯತಂತ್ರ ಸಿದ್ಧ

ಸದಾಶಿವ ಎಂ.ಎಸ್‌.
Published 1 ಜೂನ್ 2020, 1:54 IST
Last Updated 1 ಜೂನ್ 2020, 1:54 IST
ಕಳೆದ ವರ್ಷ ಆಗಸ್ಟ್‌ ಮೊದಲ ವಾರದ ಕಾಳಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಮಲ್ಲಾಪುರದಲ್ಲಿ ಕಟ್ಟಡಗಳು ಜಲಾವೃತವಾಗಿದ್ದವು (ಸಂಗ್ರಹ ಚಿತ್ರ)
ಕಳೆದ ವರ್ಷ ಆಗಸ್ಟ್‌ ಮೊದಲ ವಾರದ ಕಾಳಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಮಲ್ಲಾಪುರದಲ್ಲಿ ಕಟ್ಟಡಗಳು ಜಲಾವೃತವಾಗಿದ್ದವು (ಸಂಗ್ರಹ ಚಿತ್ರ)   

ಕಾರವಾರ:ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದಭಾರಿಮಳೆಯಿಂದ ಕಾಳಿ ನದಿಯಲ್ಲಿ ಪ್ರವಾಹ ಉಂಟಾಗಿಸಾವಿರಾರು ಮನೆಗಳು ಮುಳುಗಿದ್ದವು. ಜಲಾಶಯದಿಂದಹರಿಸಿದನೀರು ನದಿಯಲ್ಲಿ ಎಷ್ಟು ಎತ್ತರಕ್ಕೆ ಏರುತ್ತಿದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲದೆ ಗೊಂದಲವಾಗಿತ್ತು. ಅಂತಹ ಸನ್ನಿವೇಶದಲ್ಲಿ ನೆರವಾಗಬಲ್ಲ, ತಂತ್ರಜ್ಞಾನ ಆಧಾರಿತ ಕಾರ್ಯತಂತ್ರವೊಂದು ಈಗಸಿದ್ಧಗೊಂಡಿದೆ.

‘ಗೂಗಲ್ ಅರ್ಥ್’ ಮತ್ತು ‘ಜಿ.ಪಿ.ಎಸ್’ ಬಳಸಿಕೊಂಡು ನದಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟವನ್ನು ಅಧ್ಯಯನ ಮಾಡುವ ವ್ಯವಸ್ಥೆಯನ್ನು, ಜಿಲ್ಲಾ ಪಂಚಾಯ್ತಿ ಮತ್ತುನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ‌್ಯವಸ್ಥೆ (ಎನ್.ಆರ್.ಡಿ.ಎಂ.ಎಸ್) ಜೊತೆಯಾಗಿ ಸಿದ್ಧಪಡಿಸಿವೆ.

ಏನಿದು ವ್ಯವಸ್ಥೆ?: ‘ಕಳೆದ ಬಾರಿ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಜಿ.ಪಿ.ಎಸ್ ಅಳವಡಿಸಿ‘ವಸತಿ ವಿಜಿಲ್ ಆ್ಯಪ್’ ಮುಖಾಂತರ ‘ಜಿಯೊ ಟ್ಯಾಗ್’ ಮಾಡಲಾಗುತ್ತದೆ. ಜಲಾಶಯದಿಂದ ಹೊರಬಿಟ್ಟ ನೀರು ಎಷ್ಟು ಎತ್ತರದವರೆಗೆ ಬರಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಇದರ ಮೂಲಕ ತಿಳಿದುಕೊಳ್ಳಬಹುದು. ಜಲಾವೃತವಾಗುವ ಮನೆಗಳ ನಿವಾಸಿಗಳನ್ನು ಸಂಪರ್ಕಿಸಿ, ಅವರನ್ನಷ್ಟೇ ತೆರವು ಮಾಡಲು ಇದು ಸಹಕಾರಿ’ಎನ್ನುತ್ತಾರೆಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್.

ADVERTISEMENT

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕಳೆದ ವರ್ಷ ಅರಬ್ಬಿ ಸಮುದ್ರದಲ್ಲಿ ಉಬ್ಬರ ಏರ್ಪಡುವ ಎರಡು ತಾಸಿಗೂ ಮೊದಲೇ ಜಲಾಶಯದಿಂದ ಹಂತಹಂತವಾಗಿ ನದಿಗೆ ನೀರು ಹರಿಸಲಾಯಿತು. ನೆರೆಯಮೊದಲ ದಿನವಾದ ಆ.6ರಂದು 60 ಸಾವಿರ ಕ್ಯುಸೆಕ್, 7ರಂದು 1.20 ಲಕ್ಷ ಕ್ಯುಸಕ್, ಆ.8ರಂದು 1.60 ಲಕ್ಷ ಕ್ಯುಸೆಕ್, 9ರಂದು 2 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು. ಆದರೆ, ಒಳಹರಿವು ಮತ್ತೂ ಹೆಚ್ಚಿದ್ದರಿಂದ ಎರಡು ತಾಸುಗಳವರೆಗೆ 2.30 ಲಕ್ಷ ಕ್ಯುಸೆಕ್ ನೀರನ್ನು ಕಾಳಿಗೆ ಹರಿಸಲಾಯಿತು’ ಎಂದು ಅಂಕಿ ಅಂಶತಿಳಿಸಿದರು.

‘ಆ ಸಂದರ್ಭದಲ್ಲೂಮಲ್ಲಾಪುರ ಟೌನ್‌ಶಿಪ್ ಸುತ್ತಮುತ್ತ ಕೆಲವೆಡೆ ವಾಡಿಕೆಯ ಗರಿಷ್ಠ ಮಟ್ಟಕ್ಕಿಂತಕೇವಲ ಮೂರು ಅಡಿಗಳಷ್ಟು ನೀರು‌ ಹೆಚ್ಚಿತ್ತು.ಜಮೀನುತಗ್ಗಿರುವಲ್ಲಿ 10 ಅಡಿಗಳವರೆಗೂ ಸಂಗ್ರಹವಾಗಿತ್ತು. ಜಿಯೊ ಟ್ಯಾಗಿಂಗ್ ಮಾಡುವ ಸಂಬಂಧ ನಾನು ಮತ್ತುಎನ್.ಆರ್.ಡಿ.ಎಂ.ಎಸ್.ನ ತಾಂತ್ರಿಕ ಅಧಿಕಾರಿ ಅನಿಲ್ ನಾಯಕ್ಆರು ತಿಂಗಳಿನಿಂದ ಅಧ್ಯಯನ ಮಾಡುತ್ತಿದ್ದೇವೆ. ಇದರಲ್ಲಿ ಕಂಡುಕೊಂಡ ಪ್ರಕಾರ, ಇನ್ನುಮುಂದೆ ಕದ್ರಾ ಜಲಾಶಯದಿಂದ ಗರಿಷ್ಠ ಪ್ರಮಾಣದಲ್ಲಿ ನೀರು ಹರಿಸಿದರೂ ನಾವು ಗುರುತು ಮಾಡಿದ ಮಟ್ಟಕ್ಕಿಂತಅರ್ಧ ಅಡಿಯಷ್ಟು ವ್ಯತ್ಯಾಸವಾಗಬಹುದು’ ಎಂದು ತಿಳಿಸಿದರು.

ಗಂಗಾವಳಿ ನದಿಗೂ ಇದೇ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯತಂತ್ರದ ವಿನ್ಯಾಸವನ್ನು ನೈಸರ್ಗಿಕ ವಿಕೋಪಗಳ ನಿರ್ವಹಣೆ ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

‘3 ಲಕ್ಷ ಕ್ಯುಸೆಕ್ ಸಾಮರ್ಥ್ಯ’:‘ಕದ್ರಾ ಜಲಾಶಯದ ಗೇಟ್‌ಗಳಲ್ಲಿ ಗರಿಷ್ಠ 1.20 ಲಕ್ಷ ಕ್ಯುಸೆಕ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಎಂದೂಹರಿದಿರಲಿಲ್ಲ. ಆದರೆ, ಗೇಟ್‌ಗಳನ್ನು ಮೂರು ಲಕ್ಷ ಕ್ಯುಸೆಕ್ ನೀರು ಹರಿಸಲು ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅಲ್ಲದೇ ಕದ್ರಾ ಜಲಾಶಯವನ್ನು ನೈಸರ್ಗಿಕವಾಗಿ ಇರುವ ಬಂಡೆಗಳ ಮೇಲೆ ನಿರ್ಮಿಸಲಾಗಿದೆ.ಹಾಗಾಗಿ ಶತಮಾನದಲ್ಲೇ ಕಂಡು ಕೇಳರಿಯದಷ್ಟು ಪ್ರಮಾಣದಲ್ಲಿ ಒಳಹರಿವು ಬಂದಾಗಲೂ ಜಲಾಶಯ ಸುರಕ್ಷಿತವಾಗಿತ್ತು’ ಎಂದು ಮೊಹಮ್ಮದ್ ರೋಶನ್ ವಿಶ್ಲೇಷಿಸಿದರು.

ನೆರೆ ಮತ್ತು ಅಧ್ಯಯನ: ಅಂಕಿ ಅಂಶ

98:ಕಾರವಾರದಲ್ಲಿಅಧ್ಯಯನಮಾಡಿದ ಮನೆಗಳು

44:ಅಂಕೋಲಾದಲ್ಲಿಅಧ್ಯಯನ ಮಾಡಿದ ಮನೆಗಳು

2,713: ಮನೆಗಳು ಗ್ರಾಮೀಣ ಭಾಗದಲ್ಲಿಹಾನಿಯಾದವು

415; ಮನೆಗಳು ನಗರ ಪ್ರದೇಶದಲ್ಲಿಹಾನಿಯಾದವು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.