ಭಟ್ಕಳ: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಂತೋಷದಿಂದ ಜೀವನ ನಡೆಸಬೇಕು. ಸರ್ಕಾರದ ಎಲ್ಲ ಸೌಲಭ್ಯಗಳು ಜನರಿಗೆ ತಲುಪಬೇಕು. ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಗುರುವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಡಗುಂಜಿ ಗಣಪತಿ ದೇವರಿಗೆ ಮುಂಜಾನೆ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಮಾತನಾಡಿದರು.
ಆರ್‌ಸಿಬಿ ವಿಜಯೋತ್ಸವ ಸಮಯದಲ್ಲಿ 11ಜನರು ಅಸುನೀಗಿದ್ದು ಇಂತಹ ಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ನಿರ್ದರಿಸಿದ್ದೆ. ದೇವರ ದರ್ಶನ ಪಡೆದು ಮನೆಗ ಬರುವಷ್ಟರಲ್ಲಿ ಸಾವಿರಾರು ಅಭಿಮಾನಿಗಳು ಕಾರ್ಯಕರ್ತರು ತನಗೆ ಆಶಿರ್ವದಿಸಲು, ಶುಭಾಶಯ ಹಂಚಿಕೊಳ್ಳಲು ನಿಂತುಕೊಂಡಿರುವದನ್ನು ನೋಡಿ ಜನರ ಪ್ರೀತಿಗೆ ತಲೆಬಾಗಲೆ ಬೇಕಾಯಿತು. ತಾನು ಶಾಸಕನಾಗುತ್ತೇನೆ ಎಂದು ಯಾವಾಗಲೂ ಯೋಚಿಸಿರಲಿಲ್ಲ. ಅಚಾನಕ್ಕಾಗಿ ಈ ಅದೃಷ್ಟ ಒಲಿದು ಬಂದಿತ್ತು. ಬಳಿಕ ಶಾಸಕನಾಗಿ ಈಗ ಮಂತ್ರಿಯೂ ಆಗಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನಗಳಿಗೆ ತಾನು ಚಿರಋಣಿಯಾಗಿದ್ದೇನೆ ಎಂದರು.
’ತನ್ನ ಕ್ಷೇತ್ರದಲ್ಲಿ ಯಾವ ಬಡವರು ಹಸಿವಿನಿಂದ, ವಿದ್ಯಾರ್ಥಿಗಳು ಶಿಕ್ಷಣದಿಂದ ಯುವಕರು ನಿರುದ್ಯೋಗದಿಂದ ಅಲೆಯಬಾರದು. ಪ್ರವಾಸೋದ್ಯಮದ ಉನ್ನತಿಕರಣಕ್ಕಾಗಿ ಮುರ್ಡೇಶ್ವರದಲ್ಲಿ ₹400ಕೋಟಿ ವೆಚ್ಚದಲ್ಲಿ ನೂತನ ಬಂದರು ಕಾರ್ಯ ಶೀಘ್ರವೆ ನೇರವೇರಲಿದ್ದು ಇದರಿಂದ ಸ್ಥಳೀಯರಿಗೆ ಸ್ವಂತ ಉದ್ಯೋಗ ನಡೆಸಲು ಅವಕಾಶ ದೊರಯಲಿದೆ ಎಂದು ಹೇಳಿದರು.
ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ, ಸೋನಾಲಿ ವೈದ್ಯ ಹಾಜರಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಸಚಿವರಿಗೆ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.