ADVERTISEMENT

‘ಅಸಮಾಧಾನ ಶೀಘ್ರ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 11:59 IST
Last Updated 22 ಆಗಸ್ಟ್ 2019, 11:59 IST

ಶಿರಸಿ: ‘ಸಚಿವ ಸ್ಥಾನ ಸಿಗದ ಬಗ್ಗೆ ಕೆಲವರಲ್ಲಿ ಅಸಮಾಧಾನ ಇರಬಹುದು. ಆದರೆ, ಯಾರೂ ಸರ್ಕಾರ ಬೀಳಿಸುವ ಹೇಳಿಕೆ ನೀಡುತ್ತಿಲ್ಲ. ಇದು ಮಾಧ್ಯಮದ ಸೃಷ್ಟಿ’ ಎಂದು ಸಚಿವ ಜಗದೀಶ ಶೆಟ್ಟರ್ ಸಮಜಾಯಿಷಿ ನೀಡಿದರು.

ನೆರೆಪೀಡಿತ ಪ್ರದೇಶಗಳ ವೀಕ್ಷಣೆಗೆ ಗುರುವಾರ ಜಿಲ್ಲೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಸಂಪುಟ ರಚನೆಯಾದಾಗ ಅಸಮಾಧಾನ ಸಹಜ. ಅಸಮಾಧಾನಗೊಂಡವರನ್ನು ಮಾತನಾಡಿಸಿ, ಶೀಘ್ರ ಸರಿಪಡಿಸಲಾಗುವುದು’ ಎಂದರು.

‘ಪ್ರವಾಹದಿಂದ ಮನೆ ಕುಸಿದಿರುವ ಪ್ರಕರಣಗಳು ಇದ್ದಲ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವಿಷಯದ ಸತ್ಯಾಸತ್ಯತೆ ಅರಿತು ತಕ್ಷಣ ₹ 10ಸಾವಿರ ಹಣವನ್ನು ತೊಂದರೆಗೊಳಗಾದವರ ಬ್ಯಾಂಕ್ ಖಾತೆಗೆ ಹಾಕಬೇಕು ಅಥವಾ ಚೆಕ್ ಮೂಲಕ ಪರಿಹಾರ ನೀಡಬೇಕು. ಹೊಸ ಮನೆ ಕಟ್ಟಲು ನೆರವು ನೀಡುವಾಗ ವಿವರ ಪರಿಶೀಲನೆ ನಡೆಸಿ. ತಾತ್ಕಾಲಿಕ ನೆರವು ನೀಡಲು ತೀರಾ ಯೋಚನೆ ಮಾಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.