ADVERTISEMENT

ಶಿರಸಿ, ಕುಮಟಾ ಕ್ಷೇತ್ರಕ್ಕೆ ಅಭ್ಯರ್ಥಿ ಖಚಿತ

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣಪಯ್ಯ ಗೌಡ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 6:42 IST
Last Updated 13 ಅಕ್ಟೋಬರ್ 2021, 6:42 IST
ಶಿರಸಿಯ ಹಾಪ್‍ಕಾಮ್ಸ್ ಸಭಾಭವನದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಸಭೆಯಲ್ಲಿ ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮರುನಿಯುಕ್ತಿಗೊಂಡ ಆರ್.ಜಿ.ನಾಯ್ಕ ಅವರಿಗೆ ಜಿಲ್ಲಾ ಘಟಕದ ಅದ್ಯಕ್ಷ ಗಣಪಯ್ಯ ಗೌಡ ಆದೇಶ ಪತ್ರ ನೀಡಿದರು. ಮುಖಂಡ ಶಶಿಭೂಷಣ ಹೆಗಡೆ, ಪ್ರಮುಖರಾದ ಜಿ.ಕೆ.ಪಟಗಾರ, ಆನಂದು ಗೌಡ ಇತರರು ಇದ್ದಾರೆ 
ಶಿರಸಿಯ ಹಾಪ್‍ಕಾಮ್ಸ್ ಸಭಾಭವನದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಸಭೆಯಲ್ಲಿ ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮರುನಿಯುಕ್ತಿಗೊಂಡ ಆರ್.ಜಿ.ನಾಯ್ಕ ಅವರಿಗೆ ಜಿಲ್ಲಾ ಘಟಕದ ಅದ್ಯಕ್ಷ ಗಣಪಯ್ಯ ಗೌಡ ಆದೇಶ ಪತ್ರ ನೀಡಿದರು. ಮುಖಂಡ ಶಶಿಭೂಷಣ ಹೆಗಡೆ, ಪ್ರಮುಖರಾದ ಜಿ.ಕೆ.ಪಟಗಾರ, ಆನಂದು ಗೌಡ ಇತರರು ಇದ್ದಾರೆ    

ಶಿರಸಿ: ‘ಮುಂಬರುವ ವಿಧಾನಸಭೆ ಚುನಾವಣೆಗೆ ಶಿರಸಿ ಕ್ಷೇತ್ರದಿಂದ ಶಶಿಭೂಷಣ ಹೆಗಡೆ, ಕುಮಟಾ ಕ್ಷೇತ್ರದಿಂದ ಸೂರಜ ನಾಯ್ಕ ಸೋನಿ ಜೆಡಿಎಸ್ ಅಭ್ಯರ್ಥಿಗಳಾಗಿ ಆಯ್ಕೆಯಾಗುವುದುಬಹುತೇಕ ಖಚಿತ. ಅವರಿಗೆ ಈಗಿಂದಲೇ ಪಕ್ಷ ಸಂಘಟನೆಗೆ ವರಿಷ್ಠರು ಸೂಚಿಸಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣಪಯ್ಯ ಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಪಾಲಿನ ಕೆಟ್ಟ ದಿನಗಳು ಕಳೆದಿದ್ದು, ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟನೆ ಮಾಡಲಾಗುತ್ತಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಲಾಗುತ್ತಿದೆ. ಇದಕ್ಕಾಗಿ ಪಕ್ಷದ ಯುವ ಘಟಕಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದರು.

‘ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ತಾಲ್ಲೂಕು ಸಮಿತಿ ರಚಿಸಲಾಗಿದೆ. ಯಲ್ಲಾಪುರ, ಜೋಯಿಡಾ, ಕಾರವಾರ, ಅಂಕೋಲಾ ಘಟಕಕ್ಕೆ ಶೀಘ್ರದಲ್ಲಿ ಪದಾಧಿಕಾರಿ ನೇಮಿಸಲಾಗುವುದು. ಎರಡು ವಾರದೊಳಗೆ ವಿದ್ಯಾರ್ಥಿ, ರೈತ ಮೋರ್ಚಾ, ಪರಿಶಿಷ್ಟ, ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗುವುದು’ ಎಂದರು.

ADVERTISEMENT

ಮುಖಂಡ ಶಶಿಭೂಷಣ ಹೆಗಡೆ, ‘ಪಕ್ಷದ ಚಟುವಟಿಕೆ ಚುರುಕುಗೊಂಡಿದೆ. ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ರೈತ ಚೈತನ್ಯ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡುವ ವಿಚಾರಗಳನ್ನು ಜನರಿಗೆ ತಿಳಿಸಲಾಗುವುದು. ಸೈದ್ಧಾಂತಿಕ, ಜನರ ಭಾವನೆಗಳ ಜತೆ ಆಟವಾಡುವ ವಿಚಾರ ಬಿಟ್ಟು ಜನರಿಗೆ ಬೇಕಾದ ಯೋಜನೆ ರೂಪಿಸಲು ಪಕ್ಷ ತೀರ್ಮಾನಿಸಿದೆ’ ಎಂದರು.

ಜಿ.ಕೆ.ಪಟಗಾರ, ವಿ.ಎಂ.ಭಂಡಾರಿ, ಆನಂದ ಗೌಡ, ಪಿ.ಟಿ.ನಾಯ್ಕ ಮೂಡ್ಕಣಿ, ಮುನಾಫ್ ಮಿರ್ಜಾನಕರ, ಮುಜೀಬ್, ಎನ್.ಎಸ್.ಭಟ್, ಆರ್.ಜಿ.ನಾಯ್ಕ, ದೀಪಕ ರೇವಣಕರ, ರೇವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.