ADVERTISEMENT

‘ಸಾಗರ ಕವಚ’: ವಿವಿಧೆಡೆ ನಾಕಾಬಂದಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 14:22 IST
Last Updated 12 ನವೆಂಬರ್ 2021, 14:22 IST
‘ಸಾಗರ ಕವಚ’ ಅಣಕು ಕಾರ್ಯಾಚರಣೆ ಅಂಗವಾಗಿ ಕಾರವಾರದ ಬೈತಖೋಲ್‌ನಲ್ಲಿ ಪೊಲೀಸರು ಗುರುವಾರ ವಾಹನಗಳ ಪರಿಶೀಲನೆ ನಡೆಸಿದರು
‘ಸಾಗರ ಕವಚ’ ಅಣಕು ಕಾರ್ಯಾಚರಣೆ ಅಂಗವಾಗಿ ಕಾರವಾರದ ಬೈತಖೋಲ್‌ನಲ್ಲಿ ಪೊಲೀಸರು ಗುರುವಾರ ವಾಹನಗಳ ಪರಿಶೀಲನೆ ನಡೆಸಿದರು   

ಕಾರವಾರ: ಭದ್ರತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಗುರುವಾರ ಜಿಲ್ಲೆಯಾದ್ಯಂತ ಸಾಗರ ಕವಚ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. ನಗರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ಜಾರಿ ಮಾಡಿ, ಸಾರ್ವಜನಿಕರನ್ನು ತಪಾಸಣೆ ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ನಗರ ಪ್ರವೇಶಿಸುವ ಸ್ಥಳಗಳಾದ ಬೈತಖೋಲ್, ಕೋಡಿಬಾಗ್‌ನಲ್ಲಿ ಕಾಳಿ ನದಿ ಸೇತುವೆ ಬಳಿ ಹಾಗೂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬೆಳಿಗ್ಗೆ 6ರಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸಿದರು. ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿ ಕೂಲಂಕಷವಾಗಿ ಪರಿಶೀಲಿಸಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಗಸ್ತು ಸಂಚರಿಸಿ ಉಸ್ತುವಾರಿ ನೋಡಿದರು.

ಜಿಲ್ಲಾಧಿಕಾರಿ ಕಚೇರಿಗೆ ಒಂದೇ ದ್ವಾರದಿಂದ ಪ್ರವೇಶ ನೀಡಲಾಗಿತ್ತು. ಅಲ್ಲದೇ ಬರುವ ಎಲ್ಲ ಸಾರ್ವಜನಿಕರನ್ನೂ ಪ್ರಶ್ನಿಸಿ, ಭೇಟಿಯ ವಿವರ ಪಡೆದ ಬಳಿಕ ಪರಿಶೀಲಿಸಿ ಮುಂದೆ ಸಾಗಲು ಅವಕಾಶ ನೀಡಲಾಯಿತು. ಕಾರ್ಯಾಚರಣೆಯು ನ.13ರಂದು ಸಂಜೆ 6ರ ತನಕ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.