ADVERTISEMENT

ವಿಡಿಯೊ | ಯಕ್ಷಗಾನದಲ್ಲಿ ಸದ್ದು ಮಾಡಿದ ‘ಮಿಣಿಮಿಣಿ ಭಸ್ಮ’!

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 9:32 IST
Last Updated 30 ಜನವರಿ 2020, 9:32 IST
‘ಭಸ್ಮಾಸುರ ಮೋಹಿನಿ’ ಯಕ್ಷಗಾನದ ದೃಶ್ಯ
‘ಭಸ್ಮಾಸುರ ಮೋಹಿನಿ’ ಯಕ್ಷಗಾನದ ದೃಶ್ಯ   

ಕಾರವಾರ:ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆದ ‘ಮಿಣಿ ಮಿಣಿ ಪೌಡರ್’, ಇದೀಗ ಯಕ್ಷಗಾನದಲ್ಲೂಬಳಕೆಯಾಗಿದೆ. ಪಾತ್ರಧಾರಿಯೊಬ್ಬರು ಸಂಭಾಷಣೆಯಲ್ಲಿಹೇಳಿದ‘ಮಿಣಿಮಿಣಿ ಭಸ್ಮ’ದ ವಿಡಿಯೋ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ.

ಅಂಕೋಲಾ ತಾಲ್ಲೂಕಿನನೀಲಂಪುರದಲ್ಲಿಈಚೆಗೆ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರಸಂಗಪ್ರದರ್ಶನಗೊಂಡಿತ್ತು.ಹಾಸ್ಯ ಪಾತ್ರ ನಿರ್ವಹಿಸಿದಕಲಾವಿದರೊಬ್ಬರು ಸಂಭಾಷಣೆಯಲ್ಲಿ ‘ಮಿಣಿಮಿಣಿ ಭಸ್ಮ’ಎಂಬ ಪದವನ್ನು ಪ್ರಯೋಗಿಸಿದ್ದರು.ಇದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಸನ್ನಿವೇಶವೇನು?: ಪ್ರಸಂಗದಲ್ಲಿ ಭಸ್ಮಾಸುರನ ಪಾತ್ರಧಾರಿಗೆ ಹಾಸ್ಯ ಪಾತ್ರಧಾರಿ ಎದುರಾಗುತ್ತಾರೆ. ಈಶ್ವರನು ಭಸ್ಮಾಸುರನಿಗೆ ಉರಿಶಾಪ ನೀಡಿದ ಸಂಗತಿಯನ್ನು ಆತ ಹೇಳುತ್ತಾರೆ.

ADVERTISEMENT

‘ಭಸ್ಮಾಸುರನೇಎದುರಿಗೆ ಬಂದರೆ ಏನು ಮಾಡುತ್ತೀಯಾ’ ಎಂದು ಕೇಳಿದಾಗ, ಹಾಸ್ಯ ಪಾತ್ರಧಾರಿಯು, ‘ನಾನು ಹೆದರುವುದಿಲ್ಲ. ನನ್ನಪ್ಪ ನನಗೆ ಮಿಣಿಮಿಣಿ ಭಸ್ಮ ಕೊಟ್ಟಿದ್ದಾನೆ. ಅದನ್ನು ಪ್ರಯೋಗಿಸುತ್ತೇನೆ’ ಎಂದು ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.