ADVERTISEMENT

ನಾರಾಯಣಗುರು ಯಾತ್ರೆಗೆ ಭವ್ಯ ಸ್ವಾಗತ

ತಾಲ್ಲೂಕಿನಲ್ಲಿ ರಥ ಯಾತ್ರೆ ಸಂಚಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 13:10 IST
Last Updated 10 ಡಿಸೆಂಬರ್ 2018, 13:10 IST
ನಾರಾಯಣಗುರು ರಥ ಯಾತ್ರೆಗೆ ಶಿರಸಿ ತಾಲ್ಲೂಕಿನ ಕೊಳಗಿಬೀಸ್‌ನಲ್ಲಿ ಸ್ವಾಗತಿಸಲಾಯಿತು
ನಾರಾಯಣಗುರು ರಥ ಯಾತ್ರೆಗೆ ಶಿರಸಿ ತಾಲ್ಲೂಕಿನ ಕೊಳಗಿಬೀಸ್‌ನಲ್ಲಿ ಸ್ವಾಗತಿಸಲಾಯಿತು   

ಶಿರಸಿ: ಬ್ರಹ್ಮಶ್ರೀ ನಾರಾಯಣಗುರು ಧರ್ಮಗುರು ಪರಿಪಾಲನಾ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ನಾರಾಯಣಗುರು ಸಂಘಟನಾ ಯಾತ್ರೆಯನ್ನು ನಗರದಲ್ಲಿ ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಮಾರಿಕಾಂಬಾ ದೇವಾಲಯದ ಎದುರು ಬಂದ ಯಾತ್ರೆಯನ್ನು ನಾಮಧಾರಿ ಮುಖಂಡರು ಸ್ವಾಗತಿಸಿದರು. ಯಾತ್ರೆಯ ಮೂರು ದಿನಗಳ ತಾಲ್ಲೂಕು ಸಂಚಾರಕ್ಕೆ ಮಾರಿಗುಡಿ ಅಧ್ಯಕ್ಷ ವೆಂಕಟೇಶ ನಾಯ್ಕ ಚಾಲನೆ ನೀಡಿದರು. ಯಾತ್ರೆಯ ಉಸ್ತುವಾರಿ ಹೊತ್ತ ಧರ್ಮ ಪರಿಪಾಲನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದಪ್ಪ ಗುತ್ತೆದಾರ ಅವರು, ನಾರಾಯಣ ಗುರುಗಳ ತತ್ವಾದರ್ಶ ಪಾಲಿಸುವಂತೆ ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ನಾಯ್ಕ, ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ನಾಯ್ಕ, ವಕೀಲ ಎಂ.ಎನ್.ನಾಯ್ಕ, ಪ್ರಮುಖರಾದ ನಾರಾಯಣ ನಾಯ್ಕ, ರಘು ನಾಯ್ಕ, ಪಿ.ಎಸ್.ನಾಯ್ಕ, ನಾಗೇಶ ನಾಯ್ಕ, ಚಂದ್ರು ನಾಯ್ಕ, ಶ್ರೀಧರ ನಾಯ್ಕ, ಶಾಂತಾರಾಮ ನಾಯ್ಕ, ಆರ್.ಜಿ.ನಾಯ್ಕ, ಎಚ್.ಕೆ.ನಾಯ್ಕ, ಸುಮಾ ನಾಯ್ಕ ಹಾಜರಿದ್ದರು. ಶ್ರೀನಿವಾಸ ನಾಯ್ಕ ಸ್ವಾಗತಿಸಿದರು. ಯಾತ್ರೆಯು ಸೋಮವಾರ ಹನುಮಂತಿ, ಕೊಳಗಿಬೀಸ್, ಅಮ್ಮಿನಳ್ಳಿ, ಮಂಜುಗುಣಿ, ದೇವನಳ್ಳಿ, ಹೆಗಡೆಕಟ್ಟಾ, ಸಾಲ್ಕಣಿ ಹಾಗೂ ಇಡ್ತಳ್ಳಿಯಲ್ಲಿ ಸಂಚರಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.