ADVERTISEMENT

ಭಾಗಶಃ ಚಂದ್ರಗ್ರಹಣ ಅಸ್ಪಷ್ಟ ಗೋಚರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 16:05 IST
Last Updated 8 ನವೆಂಬರ್ 2022, 16:05 IST
ಕಾರವಾರದಲ್ಲಿ ಮಂಗಳವಾರ ಭಾಗಶಃ ಚಂದ್ರಗ್ರಹಣವು ಅಸ್ಪಷ್ಟವಾಗಿ ಗೋಚರಿಸಿತು
ಕಾರವಾರದಲ್ಲಿ ಮಂಗಳವಾರ ಭಾಗಶಃ ಚಂದ್ರಗ್ರಹಣವು ಅಸ್ಪಷ್ಟವಾಗಿ ಗೋಚರಿಸಿತು   

ಕಾರವಾರ: ನಗರದಲ್ಲಿ ಮಂಗಳವಾರ ಈ ವರ್ಷದ ಕೊನೆಯ ಚಂದ್ರಗ್ರಹಣವನ್ನು ವೀಕ್ಷಿಸುವ ನಿರೀಕ್ಷೆಯಲ್ಲಿದ್ದವರಿಗೆ ತುಸು ನಿರಾಸೆಯಾಯಿತು. ಗ್ರಹಣ ಬಿಡುವ ಅವಧಿಯಲ್ಲಿ ಕೊನೆಯ ಮೂರು, ನಾಲ್ಕು ನಿಮಿಷ ಮಾತ್ರ ಗೋಚರಿಸಿತು.

ಕಾರವಾರದಲ್ಲಿ ಸಂಜೆ 6.03ರಿಂದ 6.19ರ ನಡುವೆ ಗ್ರಹಣದ ವೀಕ್ಷಣೆಗೆ ಸೂಕ್ತ ಸಮಯವಾಗಿತ್ತು. ಆದರೆ, ಭೂಮಿಯ ಅಂಚಿನಿಂದ ಚಂದ್ರ ಮೇಲೆ ಬರುವಾಗಲೇ ಗ್ರಹಣದ ಅವಧಿಯು ಬಹುಪಾಲು ಮುಕ್ತಾಯವಾಗಿತ್ತು. ಅಲ್ಲದೇ ಸ್ವಲ್ಪ ಮೋಡವೂ ಅಡ್ಡ ಬಂದ ಕಾರಣ ಸರಿಯಾಗಿ ಕಾಣಲಿಲ್ಲ.

ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೋಡಿಬಾಗದ ಕಾಳಿ ನದಿ ತಟದಲ್ಲಿ ಟೆಲಿಸ್ಕೋಪ್‌ ಅಳವಡಿಸಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದೇವೇಳೆ ಗುರು ಮತ್ತು ಶನಿ ಗ್ರಹಗಳನ್ನು ಕಣ್ತುಂಬಿಕೊಂಡರು.

ADVERTISEMENT

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ, ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕ ವಿಕ್ರಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.