ADVERTISEMENT

ಶಿರಸಿ: ಪ್ರಶಾಂತ ದೇಶಪಾಂಡೆ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:28 IST
Last Updated 29 ಜುಲೈ 2021, 5:28 IST
ನೆರೆಯಿಂದ ಹಾನಿಗೆ ಒಳಗಾದ ಶಿರಸಿ ತಾಲ್ಲೂಕಿನ ಅಜ್ಜರಣಿ ಗ್ರಾಮದ ಕೃಷಿ ಭೂಮಿಯನ್ನು ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ವೀಕ್ಷಿಸಿದರು
ನೆರೆಯಿಂದ ಹಾನಿಗೆ ಒಳಗಾದ ಶಿರಸಿ ತಾಲ್ಲೂಕಿನ ಅಜ್ಜರಣಿ ಗ್ರಾಮದ ಕೃಷಿ ಭೂಮಿಯನ್ನು ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ವೀಕ್ಷಿಸಿದರು   

ಶಿರಸಿ: ವರದಾ ನದಿ ಉಕ್ಕಿದ ಪರಿಣಾಮ ನೆರೆ ಬಾಧಿತವಾದ ತಾಲ್ಲೂಕಿನ ಮೊಗವಳ್ಳಿ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಭೇಟಿ ನೀಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದಕಲ್ಲಿ, ಸಹಸ್ರಳ್ಳಿ, ಮುಂಡೆಗಳ್ಳಿ, ಅಜ್ಜರಣಿ, ಅಂಡಗಿ, ಹೊಸಕೋಪ್ಪ, ಬೆಳ್ಳನಕೇರಿ ಭಾಗದಲ್ಲಿ ವೀಕ್ಷಣೆ ಮಾಡಿದರು. ಕೃಷಿಭೂಮಿಗೆ ಹಾನಿಯುಂಟು ಮಾಡಿದ್ದ ರಂಗಾಪುರ ಕೆರೆ ವೀಕ್ಷಿಸಿದರು. ಬಳಿಕ ವರದಾ ನದಿಗೆ ಬಾಗಿನ ಅರ್ಪಿಸಿದರು. ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡರಾದ ಸಿ.ಎಫ್. ನಾಯ್ಕ, ಶ್ರೀಲತಾ ಕಾಳೇರಮನೆ, ಬಸವರಾಜ ದೊಡ್ಮನಿ, ಜ್ಯೋತಿ ಪಾಟೀಲ, ಸುಧಾಕರ ನಾಯ್ಕ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.