ADVERTISEMENT

ವಕ್ಫ್ ಆಸ್ತಿ ಮರಳಿ ಪಡೆಯುತ್ತೇವೆ; ಅನೀಸ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 16:03 IST
Last Updated 3 ಆಗಸ್ಟ್ 2022, 16:03 IST
ಅನೀಸ್ ತಹಶೀಲ್ದಾರ್
ಅನೀಸ್ ತಹಶೀಲ್ದಾರ್   

ಶಿರಸಿ: ‘ಜಿಲ್ಲೆಯಲ್ಲಿ ಹಲವು ಕಡೆ ವಕ್ಫ್ ಆಸ್ತಿ ಕಬಳಿಕೆಯಾಗಿದ್ದು ಕಾನೂನು ಹೋರಾಟದ ಮೂಲಕ ಅವುಗಳನ್ನು ಪಡೆಯಲಾಗುವುದು’ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅನೀಸ್ ತಹಶೀಲ್ದಾರ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣದಲ್ಲಿ ಹಲವರು ಕಡಿಮೆ ಬಾಡಿಗೆ ನೀಡಿ ಮಳಿಗೆ ನಡೆಸುತ್ತಿದ್ದಾರೆ. ಹತ್ತಾರು ವರ್ಷದ ಹಿಂದಿನ ದರ ಆಧರಿಸಿ ಬಾಡಿಗೆ ವಸೂಲಾಗುತ್ತಿದೆ. ಈಗಿನ ಕಾಲಕ್ಕೆ ತಕ್ಕಂತೆ ಬಾಡಿಗೆ ಹೆಚ್ಚಿಸಿ ಆಕರಿಸಲು ವ್ಯಾಪಾರಿಗಳ ಜತೆ ಸಭೆ ನಡೆಸಲಾಗುವುದು’ ಎಂದರು.

‘ಶಿರಸಿ ನಗರದಲ್ಲೇ ಸುಮಾರು ₹250 ಕೋಟಿಗೂ ಹೆಚ್ಚು ಮೌಲ್ಯದ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಅತಿಕ್ರಮಣವಾಗಿರುವ ದೂರುಗಳಿವೆ. ಈ ಬಗ್ಗೆ ಕೂಲಂಕುಷ ಪರಿಶೀಲಿಸಿ ಅವುಗಳನ್ನು ಮರಳಿ ಪಡೆಯಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಹೇಳಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಫೀಕ್ ಪಠಾಣ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.