ADVERTISEMENT

ಬಲೆಗೆ ಬಿದ್ದ ವಿಷಕಾರಿ ಸಮುದ್ರ ಹಾವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:27 IST
Last Updated 16 ಜೂನ್ 2021, 15:27 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬುಧವಾರ ಕಂಡುಬಂದ ‘ಸಮುದ್ರ ಹಾವು’
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬುಧವಾರ ಕಂಡುಬಂದ ‘ಸಮುದ್ರ ಹಾವು’   

ಕಾರವಾರ: ಅತ್ಯಂತ ವಿಷಪೂರಿತ ಸಮುದ್ರ ಹಾವೊಂದು (ಹೈಡ್ರೊಫಿಸ್ ಶಿಸ್ಟೋಸಸ್) ಮೀನುಗಾರರ ಏಂಡಿ ಬಲೆಗೆ ಬುಧವಾರ ಬಿದ್ದಿದೆ. ಅದನ್ನು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬಿಟ್ಟು ಹೋಗಿದ್ದಾರೆ.

ಮೈತುಂಬ ಕಪ್ಪು, ಬಿಳಿ ಬಣ್ಣದ ಪಟ್ಟಿಗಳನ್ನು ಹೊಂದಿರುವ ಈ ಹಾವು ನೋಡಲು ಅತ್ಯಂತ ಆಕರ್ಷಕವಾಗಿದೆ. ಅವು ಸಮುದ್ರದ ‘ಕ್ಯಾಟ್ ಫಿಶ್’ಗಳ ಮರಿಗಳನ್ನು (ಶ್ಯಾಡಿ) ಬೇಟೆಯಾಡಿ ತಿನ್ನುತ್ತವೆ. ಹಾಗೆ ಸಂಚರಿಸುವಾಗ ಕೆಲವೊಮ್ಮೆ ಏಂಡಿ ಬಲೆಗೆ ಬೀಳುತ್ತವೆ. ಅವು ಸಾಮಾನ್ಯವಾಗಿ ಮನುಷ್ಯರಿಗೆ ಕಚ್ಚುವುದಿಲ್ಲ. ಆದರೆ, ಕಚ್ಚಿದರೆ ಜೀವಕ್ಕೇ ಅಪಾಯವಾದ ಉದಾಹರಣೆಗಳೂ ಇವೆ ಎಂದುಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT