ADVERTISEMENT

ಶಿರಸಿ: ಬಿಡಾಡಿ ದನಗಳಿಗೆ ನಿತ್ಯ ಆಹಾರ

ಗೋ ಸೇವೆ ಮಾಡುವ ಯುವಕರ ತಂಡ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:17 IST
Last Updated 7 ಏಪ್ರಿಲ್ 2020, 13:17 IST
ಬಿಡಾಡಿ ದನಗಳಿಗೆ ತರಕಾರಿ ನೀಡುವ ಶಿರಸಿಯ ಯುವಕರು
ಬಿಡಾಡಿ ದನಗಳಿಗೆ ತರಕಾರಿ ನೀಡುವ ಶಿರಸಿಯ ಯುವಕರು   

ಶಿರಸಿ: ಆಹಾರಕ್ಕಾಗಿ ಅಲೆದಾಡುತ್ತಿದ್ದ ಬಿಡಾಡಿ ದನಗಳಿಗೆ ಇಲ್ಲಿನ ಯುವಕರ ತಂಡವೊಂದು ನಿತ್ಯ ಆಹಾರವನ್ನು ಒದಗಿಸುವ ಕೆಲಸ ಮಾಡುತ್ತಿದೆ. ಎಂಟು ದಿನಗಳಿಂದ ಪ್ರತಿನಿತ್ಯ ಎರಡು ತಾಸು ಊರೆಲ್ಲ ಸಂಚರಿಸಿ, ಸುಮಾರು 150 ದನಗಳಿಗೆ ಈ ಯುವಕರು ಆಹಾರ ನೀಡುತ್ತಾರೆ.

ಬೆಳಿಗ್ಗೆ ತರಕಾರಿ ಮಾರುಕಟ್ಟೆಗೆ ಹೋಗುವ ಇವರು, ಸಗಟು ವ್ಯಾಪಾರಸ್ಥರಿಂದ ಬೇಡದ ತರಕಾರಿಗಳನ್ನು ಪಡೆಯುತ್ತಾರೆ. ಅದನ್ನು ಒಂದೆಡೆ ರಾಶಿ ಹಾಕಿಕೊಂಡು, ಕೊಳೆತಿದನ್ನು ಬೇರ್ಪಡಿಸಿ, ತೊಳೆದು ವಾಹನದಲ್ಲಿ ತುಂಬಿಕೊಂಡು ಹೊರಡುತ್ತಾರೆ. ‘ಲಾಕ್‌ಡೌನ್ ಆರಂಭವಾದ ಮೇಲೆ ಜಾನುವಾರುಗಳಿಗೆ ಸರಿಯಾಗಿ ಆಹಾರ ಸಿಗುವುದಿಲ್ಲ. ಗೋ ಸೇವೆ ನಮಗೆ ಖುಷಿಯ ಕೆಲಸ. ಹೀಗಾಗಿ, ಪ್ರತಿದಿನ ಸಂಜೆ ಎರಡು ತಾಸು ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಿದ್ದೇವೆ’ ಎನ್ನುತ್ತಾರೆ ತಂಡದ ಪ್ರಮುಖ ಆನಂದ ಗೌಳಿ.

‘ಮಾರುಕಟ್ಟೆಯಲ್ಲಿ ಸುಮಾರು 15 ಚೀಲದಷ್ಟು, ಹಾಳಾಗಲು ಬಂದಿರುವ ತರಕಾರಿ ಸಿಗುತ್ತದೆ. ಜತೆಗೆ, ಸ್ವೀಟ್‌ ಕಾರ್ನ್ ಕುಂಡಿಗೆಗಳು ಸಿಗುತ್ತವೆ. ಅವುಗಳನ್ನು ಸಣ್ಣ ತುಂಡು ಮಾಡಿ, ಎಲ್ಲವನ್ನೂ ಸೇರಿಸಿ, ವಾಹನದಲ್ಲಿ ಹಾಕಿಕೊಂಡು ನಗರ ಸಂಚಾರ ಮಾಡುತ್ತೇವೆ. ದನಗಳು ನಾವು ಬರುವುದನ್ನೇ ಕಾಯುತ್ತಿರುತ್ತವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.