ADVERTISEMENT

ಜಿಲೇಬಿ ತಿನ್ನುವವನೇ ಬೇರೆ, ಜೈಲಿಗೆ ಹೋಗುವವನೇ ಬೇರೆ: ಶಾಸಕ ಹೆಬ್ಬಾರ ಕಿಡಿ

ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನಡೆಗೆ ಶಾಸಕ ಹೆಬ್ಬಾರ ಕಿಡಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 0:12 IST
Last Updated 27 ಮಾರ್ಚ್ 2025, 0:12 IST
ಕಾರವಾರಕ್ಕೆ ಬುಧವಾರ ಆಗಮಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ ಜತೆ ಶಾಸಕ ಶಿವರಾಮ ಹೆಬ್ಬಾರ ಕಾಣಿಸಿಕೊಂಡರು
ಕಾರವಾರಕ್ಕೆ ಬುಧವಾರ ಆಗಮಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ ಜತೆ ಶಾಸಕ ಶಿವರಾಮ ಹೆಬ್ಬಾರ ಕಾಣಿಸಿಕೊಂಡರು   

ಕಾರವಾರ: 'ಬಿಜೆಪಿಯಲ್ಲಿ ಜೈಕಾರ ಹಾಕುವವನು ಮತ್ತು ಜಿಲೇಬಿ ತಿನ್ನುವವನು ಇಬ್ಬರೂ ಬೇರೆ ಬೇರೆ. ಕೊನೆಗೆ ಜೈಲಿಗೆ ಹೋಗುವವನೇ ಬೇರೆ. ಈ ವಾಸ್ತವ ಎಲ್ಲರಿಗೂ ಗೊತ್ತು’ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ನೀಡಿದ ನೊಟೀಸ್‌ಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಅಧ್ಯಕ್ಷರ ವಿರುದ್ಧ ಬಿ.ಪಿ.ಹರೀಶ ಮಾತನಾಡಿದರು. ಯಾರನ್ನು ಗೌರವಿಸಬೇಕು ಎಂಬ ಗೊಂದಲ  ರೇಣುಕಾಚಾರ್ಯ ಅವರಿಗಿತ್ತು. ಇನ್ನೂ ಹಲವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಆದರೆ, ಯಾರ ಮೇಲೂ ಕ್ರಮವಾಗಿಲ್ಲ’ ಎಂದರು.

‘ನನಗೆ ಪಕ್ಷದ ಶಿಸ್ತು ಸಮಿತಿಯ ನೋಟಿಸ್ ತಲುಪಿಲ್ಲ. ನೋಟಿಸ್‌ ತಲುಪಿದ ನಂತರ ಬಳಿಕ ಉತ್ತರಿಸುವೆ. ನಾನು ಯಾವ ಅಪರಾಧ ಮಾಡಿಲ್ಲ. ನನಗೆ ಆದ ನೋವು, ಪ್ರಚೋದನೆ ನೀಡಿದ್ದರ ಬಗ್ಗೆ ಪತ್ರದ ಮೂಲಕ ತಿಳಿಸುವೆ' ಎಂದರು.

ADVERTISEMENT

‘ನಾನು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯ ಇಲ್ಲದಿರುವುದಕ್ಕೆ ಸಕಾರಣವಿದೆ. ಆದರೆ, ನಾನೆಲ್ಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾಯಕರ ವಿರುದ್ಧ ಮಾತನಾಡಿಲ್ಲ. ಆದರೂ ನನಗೆ ನೋಟಿಸ್ ನೀಡಲಾಗಿದೆ. ಬಿಜೆಪಿಯಲ್ಲಿ ಜಿಲೇಬಿ ತಿನ್ನುವವರು ತಿನ್ನುತ್ತ ಇರುತ್ತಾರೆ. ನಮ್ಮಂಥವರು ಜೈಲಿಗೆ ಹೋಗುತ್ತೇವೆ’ ಎಂದರು.

ಜಿಲ್ಲೆಗೆ ಭೇಟಿ ನೀಡಿದ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಶಿವರಾಮ ಹೆಬ್ಬಾರ ಕಾಣಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.