ADVERTISEMENT

ಅಂಚೆ ಇಲಾಖೆ: ಸ್ವಾವಲಂಬಿ ತಂತ್ರಾಂಶಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:56 IST
Last Updated 26 ಜೂನ್ 2025, 13:56 IST
ಭಾರತೀಯ ಅಂಚೆ ಇಲಾಖೆಯ ಹೊಸ ಸ್ವಾವಲಂಬಿ ತಂತ್ರಾಂಶಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಶಿರಸಿಯ ಅಂಚೆ ವಿಭಾಗದ ಪ್ರಧಾನ ಕಚೇರಿಯಲ್ಲಿ ನಡೆಯಿತು
ಭಾರತೀಯ ಅಂಚೆ ಇಲಾಖೆಯ ಹೊಸ ಸ್ವಾವಲಂಬಿ ತಂತ್ರಾಂಶಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಶಿರಸಿಯ ಅಂಚೆ ವಿಭಾಗದ ಪ್ರಧಾನ ಕಚೇರಿಯಲ್ಲಿ ನಡೆಯಿತು   

ಶಿರಸಿ: ಭಾರತೀಯ ಅಂಚೆ ಇಲಾಖೆಯ ಹೊಸ ಸ್ವಾವಲಂಬಿ ತಂತ್ರಾಂಶವು ಇಲ್ಲಿನ ಅಂಚೆ ವಿಭಾಗದ ಪ್ರಧಾನ ಮತ್ತು ಎಲ್ಲ ಶಾಖಾ ಅಂಚೆ ಕಚೇರಿಗಳಲ್ಲಿ ಗುರುವಾರದಿಂದ ಕಾರ್ಯಾರಂಭಿಸಿತು.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಶಿರಸಿ ಅಂಚೆ ವಿಭಾಗದ ಅಧೀಕ್ಷಕ ಹೂವಪ್ಪ ಜಿ. ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿ, ‘ಇದು ಅತ್ಯಂತ ಸುಧಾರಿತ ತಂತ್ರಾಂಶವಾಗಿದೆ. ಇದರಿಂದಾಗಿ ಗ್ರಾಹಕರಿಗೆ ನಿಖರ ಸೇವೆ ಒದಗಿಸಲು ಸಹಕಾರಿಯಾಗುತ್ತದೆ. ಅಂಚೆ ಇಲಾಖೆಯ ತಂತ್ರಾಂಶವನ್ನು ನುರಿತ ಅಂಚೆ ತಂತ್ರಜ್ಞರು ತಯಾರಿಸಿದ್ದಾರೆ’ ಎಂದು ತಿಳಿಸಿದರು.

‘ದೇಶದಲ್ಲಿಯೇ ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಈ ತಂತ್ರಾಂಶ ಜಾರಿಗೆ ತರಲಾಗಿದೆ. ಗ್ರಾಹಕರು ತಮ್ಮ ಮನೆಯಿಂದಲೇ ಅನೇಕ ಸೇವೆಗಳನ್ನು ಪಡೆಯಬಹುದು’ ಎಂದು ಹೇಳಿದರು.

ADVERTISEMENT

ಸಹಾಯಕ ಅಂಚೆ ಅಧೀಕ್ಷಕ ನಿಂಗನಗೌಡ ಭಂಗೀಗೌಡರ್, ಅಂಚೆ ಪಾಲಕ ಗೋಪಾಲ ಲಮಾಣಿ, ಅಂಚೆ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

ಈಗಾಗಲೇ ಅಂಚೆ ಇಲಾಖೆ ಹಲವು ದಶಕಗಳಿಂದ ಜನರ ಮನೆ ಬಾಗಿಲಿಗೆ ವಿಶ್ವಾಸರ್ಹ ಸೇವೆ ನೀಡುತ್ತಿದೆ. ಈ ಸಾಲಿಗೆ ಈಗ ನವೀಕರಣಗೊಂಡ ತಂತ್ರಾಂಶವು ಗ್ರಾಹಕ ಮತ್ತು ಅಂಚೆ ನೌಕರರ ಸ್ನೇಹಿಯಾಗಿ ರೂಪಾಂತರಗೊಳ್ಳಲಿದೆ.
ಹೂವಪ್ಪ ಜಿ ಶಿರಸಿ ಅಂಚೆ ವಿಭಾಗದ ಅಧೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.