ADVERTISEMENT

ರೈತ ಉತ್ಪಾದಕ ಕಂಪನಿಗಳು ರೈತರ ಅವಶ್ಯಕ: ಸುಜಯ್ ಭಟ್ಟ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:54 IST
Last Updated 8 ಜೂನ್ 2025, 16:54 IST
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ಪಿಎಂಎಫ್‍ಎಂಇ ಯೋಜನೆಯಲ್ಲಿ ನಿರ್ಮಿಸಿರುವ  ಸೋಲಾರ್ ಡ್ರೈಯರ್ ಲೋಕಾರ್ಪಣೆ ಮಾಡಲಾಯಿತು
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ಪಿಎಂಎಫ್‍ಎಂಇ ಯೋಜನೆಯಲ್ಲಿ ನಿರ್ಮಿಸಿರುವ  ಸೋಲಾರ್ ಡ್ರೈಯರ್ ಲೋಕಾರ್ಪಣೆ ಮಾಡಲಾಯಿತು   

ಪ್ರಜಾವಾಣಿ ವಾರ್ತೆ

ಸಿದ್ದಾಪುರ: ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ರಾಜ್ಯದ ಹತ್ತು ಅತ್ಯುತ್ತಮ ರೈತ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿದೆ ಎಂದು ಪಿಎಂಎಫ್‍ಎಂಇ(ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ) ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುಜಯ್ ಭಟ್ಟ ಹೊಸಳ್ಳಿ ಹೇಳಿದರು.

ತಾಲ್ಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಪೈಸ್ ಪ್ರೊಡ್ಯೂಸರ್ ಕಂಪನಿ ಪಿಎಂಎಫ್‍ಎಂಇ ಯೋಜನೆಯಲ್ಲಿ ನಿರ್ಮಿಸಿರುವ ಸೋಲಾರ್ ಡ್ರೈಯರ್ ಹಾಗೂ ಇನ್ನಿತರ ಕೃಷಿಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಅವರು ಮಾತನಾಡಿದರು.

ADVERTISEMENT

ಕಂಪನಿಯು ಸ್ವಂತ ಜಾಗ, ಗೋದಾಮು, ಕಾರ್ಯಾಲಯ, ಪ್ರೊಸೆಸಿಂಗ್ ಯುನಿಟ್‍ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತ, ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ. ಕಂಪನಿ ಮತ್ತಷ್ಟು ರೈತಪರ ಯೋಜನೆಗಳನ್ನು ಹಮ್ಮಿಕೊಂಡು ರೈತರ ಅವಶ್ಯಕತೆಯನ್ನು ಪೂರೈಸುವಂತಾಗಲಿ ಎಂದರು.

ಕಮಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ಮಾತನಾಡಿ, ₹30ಲಕ್ಷ ಮೊತ್ತದ ಯೋಜನೆ ಇದಾಗಿದ್ದು, ₹15ಲಕ್ಷ ಸರ್ಕಾರದ ಸಹಾಯಧನ ಹಾಗೂ ಇನ್ನುಳಿದ ₹15ಲಕ್ಷವನ್ನು ಕಂಪನಿ ಹೂಡಿಕೆ ಮಾಡಿದೆ. ಯೋಜನೆಯ ಮೂಲಕ ಸೋಲಾರ್ ಡ್ರೈಯರ್, ತೆಂಗಿನಕಾಯಿ ಸುಲಿಯುವ ಯಂತ್ರ, ಸೊಪ್ಪು ಕೊಚ್ಚುವ ಯಂತ್ರ, ಪ್ಯಾಕಿಂಗ್ ಮಶೀನ್, ಕಾಳು ಮೆಣಸು ಬಿಡಿಸುವ ಯಂತ್ರ ಸೇರಿದಂತೆ ಮತ್ತಿತರ ಸೇವೆಗಳನ್ನು ರೈತರಿಗೆ ನೀಡುತ್ತಿದೆ. ಸಹಕಾರಿ ಸಂಘಗಳಿಗೆ ಪ್ರತಿಸ್ರ್ಪರ್ದಿ ಆಗದೇ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಕೃಷಿ ಆಧಾರಿತ ಉದ್ದಿಮೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಟಿಎಂಎಸ್ ನಿರ್ದೇಶಕ ಸುಧೀರ್ ಗೌಡರ್ ಹಾಗೂ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಇವರು ಸೋಲಾರ್ ಡ್ರೈಯರ್ ಲೋಕಾರ್ಪಣೆ ಮಾಡಿದರು.

ಟಿಎಸ್‍ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮತ್ತು ಶಿರಸಿಯ ಕದಂಬ ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ನರೇಂದ್ರ ಹೆಗಡೆ ಹೊಂಡಗಾಶಿ ಇವರು ಕೃಷಿ ಯಂತ್ರೋಪಕರಣಗಳನ್ನು ಲೋಕಾರ್ಪಣೆ ಮಾಡಿದರು.

ಕಂಪನಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು. ರವೀಂದ್ರ ಹೆಗಡೆ ಹೊಂಡಗಾಶಿ ವಂದಿಸಿದರು. ಲೋಕೇಶ ಹೆಗಡೆ ವಡಗೆರೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.