ಯಕ್ಷಗಾನ
ಬೈಂದೂರು: ಉತ್ತರ ಕನ್ನಡ ಜಿಲ್ಲೆಯ ನೀಲ್ಕೋಡಿನ ಅಭಿನೇತ್ರಿ ಆರ್ಟ್ ಟ್ರಸ್ಟ್ ನೇತೃತ್ವದಲ್ಲಿ ಅನುಭವಿ, ವೃತ್ತಿಪರ ಯಕ್ಷಗಾನ ಕಲಾವಿದರ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ.
ಅಲ್ಲಿನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ (ಅಯಮ) ಪ್ರದರ್ಶನಗಳನ್ನು ನಿರ್ವಹಿಸಲಿದೆ. ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಗಾರ ರಾಘವೇಂದ್ರ ಯಲಗುಪ್ಪ, ಚೆಂಡೆವಾದಕ ಗಣೇಶ ಗಾಂವ್ಕರ್, ವೇಷಧಾರಿಗಳಾದ ಶಂಕರ ನೀಲ್ಕೋಡು, ಸುಬ್ರಹ್ಮಣ್ಯ ಯಲಗುಪ್ಪ, ಸನ್ಮಯ್ ಭಟ್ ತಂಡದಲ್ಲಿ ಇದ್ದಾರೆ.
ತಂಡ 20 ದಿನ ಇಂಗ್ಲೆಂಡ್‌ನಲ್ಲಿ ತಂಗಲಿದ್ದು, ಜೂನ್ 20ಕ್ಕೆ ಬಾಸಿಲ್ಡನ್‌ನಲ್ಲಿ, 21ಕ್ಕೆ ರೀಡಿಂಗ್‌ನಲ್ಲಿ, 22ಕ್ಕೆ ಕಾರ್ಡಿಫ್‌ನಲ್ಲಿ, 28ಕ್ಕೆ ಡರ್ಬಿಯಲ್ಲಿ, 29ಕ್ಕೆ ಮ್ಯಾಂಚೆಸ್ಟರ್‌ನಲ್ಲಿ, ಜುಲೈ 5ಕ್ಕೆ ಸಾಲಿಹುಲ್‌ನಲ್ಲಿ ಪ್ರದರ್ಶನಗಳು ನಿಗದಿಯಾಗಿವೆ ಎಂದು ‘ಅಯಮ’ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.