ADVERTISEMENT

‘ಅಹಿಂದ ಸಮುದಾಯಗಳಿಗೆ ಅರಸು ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 12:35 IST
Last Updated 26 ಆಗಸ್ಟ್ 2022, 12:35 IST
ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನವನ್ನು ಮುಖಂಡ ಡಿ. ವೆಂಕಟರಮಣ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನವನ್ನು ಮುಖಂಡ ಡಿ. ವೆಂಕಟರಮಣ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಅಹಿಂದ ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ಅವುಗಳ ಏಳಿಗೆಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರ’ ಎಂದು ಕಾಂಗ್ರೆಸ್ ಮುಖಂಡ ಆರ್.ಚೇತನರಾಜ್ ಜೈನ್ ಹೇಳಿದರು.

ದೇವರಾಜ ಅರಸು 107ನೇ ಜಯಂತಿ ನಿಮಿತ್ತ ತಾಲ್ಲೂಕಿನ ಕೊಂಡನಾಯಕನಹಳ್ಳಿಯ ಬೆತ್ಲೆಹೆಮ್ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ಹಾಗೂ ನಲ್ಲಾಪುರ ಅಹಿಂದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ದೇವರಾಜ ಅರಸು ಅವರು ಸಿ.ಎಂ ಆಗಿದ್ದಾಗ ಜಾರಿಗೆ ತಂದ 20 ಕಾರ್ಯಕ್ರಮಗಳು ಬಡ ಜನರನ್ನು, ಹಿಂದುಳಿದ ವರ್ಗಗಳ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದವು. ಅಹಿಂದ ಸಮುದಾಯಗಳು ಅವರನ್ನು ಎಂದಿಗೂ ಮರೆಯುವಂತಿಲ್ಲ. ಅದಾದ ನಂತರ ಸಿದ್ದರಾಮಯ್ಯನವರು ಸಹ ಅದೇ ಹಾದಿಯಲ್ಲಿ ಸಾಗಿ ಅಹಿಂದ ಸಮುದಾಯಗಳಿಗೆ ಆಶಾಕಿರಣವಾಗಿದ್ದಾರೆ ಎಂದರು.

ADVERTISEMENT

ಮುಖಂಡ ಡಿ.ವೆಂಕಟರಮಣ ಮಾತನಾಡಿ, ಊಳುವವನೇ ಹೊಲದೊಡೆಯಲೆಂಬ ಕಾನೂನು ಜಾರಿ ಮಾಡಿ ಇಡೀ ದೇಶದಲ್ಲೇ ಅತಿ ಹೆಚ್ಚು ಶೋಷಿತ ಸಮುದಾಯಗಳಿಗೆ ಸುಮಾರು 11 ಲಕ್ಷ ಭೂಮಿ ಕೊಟ್ಟ ಸಿ.ಎಂ ಎಂಬ ಹೆಗ್ಗಳಿಕೆ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.

ಅಹಿಂದ ತಾಲ್ಲೂಕು ಅಧ್ಯಕ್ಷ ದಲ್ಲಾಲಿ ಕುಬೇರ, ನಗರಸಭೆ ಮಾಜಿ ಸದಸ್ಯೆ ನೂರ್ ಜಹಾನ್, ಮುಖಂಡರಾದ ವಿ.ಗಾಳೆಪ್ಪ, ಆರ್.ಮಂಜುನಾಥ, ಬಾಲಸಾಬ್, ಕೃಷ್ಣ, ಕೇಶವ, ದೇವರಾಜ, ಕೆ.ಎಸ್.ಗಾಳೆಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗಭೂಷಣ, ಸದಸ್ಯ ಅನ್ವರ್ ಬಾಷಾ, ಕೆ.ಯುವರಾಜ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.