ADVERTISEMENT

ಗ್ರಾಮಾಡಳಿತ: ಮುಂದುವರಿದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:14 IST
Last Updated 11 ಫೆಬ್ರುವರಿ 2025, 16:14 IST

ಪ್ರಜಾವಾಣಿ ವಾರ್ತೆ

ಹೊಸಪೇಟೆ (ವಿಜಯನಗರ): ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ ಮಂಗಳವಾರವೂ ಮುಂದುವರಿದಿದ್ದು, ಬುಧವಾರ ಸಂಜೆಯೊಳಗೆ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

‘ನಾವು ಮುಷ್ಕರ ಮುಂದುವರಿಸಿದ್ದೇವೆ, ಎಲ್ಲಾ ಸೇವೆಗಳೂ ಬಂದ್‌ ಆಗಿವೆ. ಬುಧವಾರ ಸಂಜೆ ವೇಳೆಗೆ ಅನಿರ್ದಿಷ್ಟ ಅವಧಿಯ ಮುಷ್ಕರ ಮುಂದುವರಿಯಲಿದೆಯೋ, ಕೊನೆಗೊಳ್ಳಲಿದೆಯೋ ಎಂಬುದು ನಿರ್ಧಾರವಾಗಲಿದೆ. ನಾವಂತೂ ಒಂದು ತಿಂಗಳ ರಜೆಗೆ ಅರ್ಜಿ ಹಾಕಿದ್ದೇವೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ರವಿಚಂದ್ರ ಎಸ್.ಗೊಗ್ಗಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.