ADVERTISEMENT

‘ಇಂಡಿ: ಬಿಜೆಪಿಯಲ್ಲಿ ಗೊಂದಲ ಇಲ್ಲ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 13:15 IST
Last Updated 25 ಏಪ್ರಿಲ್ 2018, 13:15 IST
ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯೊಂದಿಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯೊಂದಿಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.   

ಇಂಡಿ: ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಪಟ್ಟಣದ ಬೀರಪ್ಪ ದೇವರಿಗೆ ಪೂಜೆ ಸಲ್ಲಿಸಿ, ಬೆಂಬಲಿಗರೊಂದಿಗೆ ತೆರೆದ ಜೀಪಿನಲ್ಲಿ ಮೆರವಣಿಗೆಯೊಂದಿಗೆ ಮಿನಿವಿಧಾನ ಸೌಧಕ್ಕೆ ತೆರಳಿ ಚುನಾವಣಾಧಿಕಾರಿ ಡಾ.ಪಿ.ರಾಜ್ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ 10ಕ್ಕೆ ಭೀರಪ್ಪನಗರದಿಂದ ಹೊರಟ ಮೆರವಣಿಗೆಯು ಜಗಜೀವನರಾಂ ವೃತ್ತ, ಟಿಪ್ಪುಸುಲ್ತಾನ್ ವೃತ್ತ, ಬಸವೇಶ್ವರರ ವೃತ್ತದ ಮೂಲಕ ಮಿನಿವಿಧಾನಸೌಧ ತಲುಪಿತು. ಸುಮಾರು 2 ಗಂಟೆ ಕಾಲ ನಡೆದ ಮೆರವಣಿಗೆಯುದ್ದಕ್ಕೂ ಬಿಜೆಪಿ ಪರ ಘೋಷಣೆಗಳು ಮೊಳಗಿದವು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ದಯಾಸಾಗರ ಪಾಟೀಲ ಮಾತನಾಡಿ, ’ಇಂಡಿ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಯಾವದೇ ಗೊಂದಲವಿಲ್ಲ. ಟಿಕೆಟ್ ಆಕಾಂಕ್ಷಿಗಳೆಲ್ಲರೂ ನನ್ನ ಜೊತೆಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ  ಚುನಾವಣೆ ಎದುರಿಸುತ್ತೇವೆ’ ಎಂದರು.

ADVERTISEMENT

ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕಾಸೂಗೌಡ ಬಿರಾದಾರ, ಬಾಬುಗೌಡ ಬಿರಾದಾರ, ರವಿ ಬಗಲಿ, ಮುತ್ತಿ ದೇಸಾಯಿ, ಶ್ರೀಶೈಲಗೌಡ ಬಿರಾದಾರ, ಸಿದ್ಧಲಿಂಗ ಹಂಜಗಿ, ಪಾಪು ಕಿತ್ತಲಿ, ಎಸ್.ಎ. ಪಾಟೀಲ, ಅನಿಲ ಜಮಾದಾರ, ಅಣ್ಣಪ್ಪ ಖೈನೂರ, ಶ್ರೀಕಾಂತ ದೇವರ, ಗೋವಿಂದ ರಾಠೋಡ, ವಿಜು ರಾಠೋಡ, ದೇವೇಮದ್ರ ಕುಂಬಾರ, ಸೋಮು ನಿಂಬರಗಿಮಠ, ಅನೀಲಗೌಡ ಬಿರಾದಾರ, ಮಚ್ಚೇಂದ್ರ ಕದಂ, ಸಂಜು ದಶವಂತ, ಶಂಕರ ಕೊಡೆ, ಮಲ್ಲಯ್ಯ ಪತ್ರಿಮಠ, ಯಮುನಾಜಿ ಸಾಳುಂಕೆ, ಸೋಮು ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.