ADVERTISEMENT

ಟಿಪ್ಪು ಕುರಿತ ಬಹಿರಂಗ ಚರ್ಚೆಗೆ ಆಹ್ವಾನ

ವಿಎಚ್‌ಪಿ ಕ್ಷೇತ್ರೀಯ ಸಂಘಟನಾ ಸಂಚಾಲಕ ಗೋಪಾಲ್‌ಗೆ ಸವಾಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:43 IST
Last Updated 30 ಮಾರ್ಚ್ 2018, 6:43 IST

ತಾಂಬಾ: ‘ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಸಂಚಾಲಕ ಗೋಪಾಲ್‌, ಟಿಪ್ಪು ಸುಲ್ತಾನ್‌ ಚರಿತ್ರೆ ಅರಿತಿಲ್ಲ. ಈ ಕುರಿತು ಬಹಿರಂಗ ಚರ್ಚೆ ನಡೆಸುವುದಾದರೆ, ವೇದಿಕೆಯನ್ನು ನಾನೇ ಸಿದ್ಧಗೊಳಿಸುವೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ ವಾಲೀಕಾರ ಹೇಳಿದರು.

‘ಟಿಪ್ಪು ಕುರಿತಂತೆ ಗೋಪಾಲ್‌ ಇಂಡಿಯಲ್ಲಿ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದುದು. ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಆಚರಿಸಲ್ಲ ಎಂದು ಹೇಳಿರುವುದು ಉದ್ಧಟತನದಿಂದ ಕೂಡಿದೆ’ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಾರತೀಯ ಮುಸಲ್ಮಾನರ ವಿರೋಧವಿಲ್ಲ. ಆದರೆ ಇದೂವರೆಗೂ ಮಂದಿರ ನಿರ್ಮಿಸದೇ ಯುವ ಸಮೂಹದಲ್ಲಿ ತಪ್ಪು ಕಲ್ಪನೆ ಮೂಡಿಸಿ, ಸೌಹಾರ್ದತೆಗೆ ಧಕ್ಕೆ ತರುವ ಯತ್ನವನ್ನು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ’ ಎಂದು ದೂರಿದರು.

ADVERTISEMENT

‘ಗೋವಿನ ಬಗ್ಗೆ ಮಾತನಾಡುವ ಗೋಪಾಲ, ಎತ್ತುಗಳ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಇವರು ಗೋ ರಕ್ಷಕರ ಸೋಗು ಹೊಂದಿರುವವರು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಎತ್ತು ನಂದಿಯ ಸ್ವರೂಪ. ರೈತರ ಆರಾಧ್ಯ ದೈವ. ಆಕಳು ಮತ್ತು ಎತ್ತುಗಳ ಹತ್ಯೆ ಆಗಬಾರದು. ಆದರೆ ಇವರು ಧರ್ಮಾಂದತೆಯ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಹಾಸಿಂಪೀರ ವಾಲೀಕರ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.