ADVERTISEMENT

‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 8:30 IST
Last Updated 7 ಡಿಸೆಂಬರ್ 2017, 8:30 IST

ಮುದ್ದೇಬಿಹಾಳ: "ನಮ್ಮ ಬಳಿ ಲಿಂಗಾಯತ ಧರ್ಮಕ್ಕೆ ಸಂವಿಧಾನಕ್ಕೆ ಮಾನ್ಯತೆ ನೀಡುವಷ್ಟು ಎಲ್ಲ ದಾಖಲೆಗಳಿವೆ. ಅವುಗಳ ಮೂಲಕ ನಾವು ಮಾನ್ಯತೆ ಪಡೆದೇ ಪಡೆಯುತ್ತೇವೆ' ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಪಟ್ಟಣದ ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾ ಭವನದಲ್ಲಿ ಬುಧವಾರ ನಡೆದ ವಿಜಯಪುರದಲ್ಲಿ ನಡೆ ಯಲಿರುವ ಲಿಂಗಾಯತ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಹೊಸ ಧರ್ಮ ಸೃಷ್ಟಿಗೆ ಮಾನ್ಯತೆ ಇಲ್ಲ ನಿಜ. ಆದರೆ ಈಗಾಗಲೇ ಇರುವಂಥ ಧರ್ಮಕ್ಕೆ ಮಾನ್ಯತೆ ಕೊಡಲು ಅವಕಾಶ ಇದೆ. ಇದನ್ನೇ ಬಳಸಿಕೊಂಡು ಲಿಂಗಾಯತ ಪ್ರತ್ಯೇಕ ಧರ್ಮ, ಅಲ್ಪಸಂಖ್ಯಾತ ಮಾನ್ಯತೆ ಪಡೆದುಕೊಳ್ಳುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಸವಸೇನೆ ಅಧ್ಯಕ್ಷ, ಸಚಿವ ವಿನಯ ಕುಲಕರ್ಣಿ ಮಾತನಾಡಿ, ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಅಲ್ಲ. ನಮ್ಮ ಸಮಾಜಕ್ಕೆ ಸಿಗಬೇಕಾದ ಸೌಲಭ್ಯ ಕೇಳುವುದು ನಮ್ಮ ಗುರಿಯಾಗಿದೆ. ಈ ಹೋರಾಟದ ಮುಂಚೂಣಿಯಲ್ಲಿರುವ ನಮಗೆ ಸಾಕಷ್ಟು ಬೆದರಿಕೆ ಬರುತ್ತಿವೆ. ಆದರೆ, ಇಂಥಹ ಗೊಡ್ಡು ಬೆದರಿಕೆಗಳಿಗೆ ಅಂಜುವ ಪ್ರಶ್ನೆ ಇಲ್ಲ ಎಂದರು.

ADVERTISEMENT

ಬಸವರಾಜ ಕಶೆಟ್ಟಿ, ಸಿದ್ದಣ್ಣ ಸಕ್ರಿ, ಬಿ.ಎಸ್.ಪಾಟೀಲ ಯಾಳಗಿ, ಸುಭಾಷ ಛಾಯಾಗೋಳ, ಬಸವರಾಜ ಮೋಟಗಿ, ಸಂಗಮೇಶ ಬಬಲೇಶ್ವರ, ಎಂ.ಬಿ.ನಾವದಗಿ, ಅಡಿವೆಪ್ಪ ಕಡಿ, ರವಿ ಬಿರಾದಾರ, ಸತೀಶ ಓಸ್ವಾಲ್, ನಿಂಗಣ್ಣ ಚಟ್ಟೇರ, ವೆಂಕನಗೌಡ ಪಾಟೀಲ, ಬಾಬು ಬಿರಾದಾರ, ಬಸನಗೌಡ ಪಾಟೀಲ ಉಪಸ್ಥಿತರಿದ್ದರು. ಹೇಮರಡ್ಡಿ ಮಲ್ಲಮ್ಮ ಸೇವಾ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.