ADVERTISEMENT

ನೂತನ ಉಪ ಅಂಚೆ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 6:00 IST
Last Updated 2 ಮಾರ್ಚ್ 2012, 6:00 IST

ಬೀದರ್: ಭಾರತೀಯ ಅಂಚೆ ಇಲಾಖೆಯ ನೂತನ ಉಪ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭ ನಗರದ ಸಿದ್ಧಾರೂಢ ಮಠದಲ್ಲಿ ಗುರುವಾರ ನಡೆಯಿತು.

ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ವ್ಯವಹರಿಸುವ ಮೂಲಕ ಅಂಚೆ ಇಲಾಖೆಗೆ ಸಹಕರಿಸಬೇಕು ಎಂದು ಉದ್ಘಾಟನೆ ನೆರವೇರಿಸಿದ ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚನ್ನಬಸಪ್ಪ ಹಾಲಹಳ್ಳಿ ಹೇಳಿದರು.

ನೂತನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ, ಜೀವ ವಿಮೆ, ಪರೀಕ್ಷಾ ಪತ್ರಿಕೆಗಳ ಸಾಗಣೆ, ಅಂಚೆ ಚೀಟಿ, ಸ್ಪೀಡ್ ಪೋಸ್ಟ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಅಂಚೆ ಇಲಾಖೆಯ ಅಧೀಕ್ಷಕ ಬಿ. ಜಗನ್ನಾಥರಾವ ಗ್ರಾಹಕರಿಗೆ ತಿಳಿಸಿದರು.

ಪ್ರಮುಖರಾದ ಬಿ.ಜಿ. ಶೆಟಕಾರ, ರವೀಂದ್ರಕುಮಾರ, ಗುಣವಂತ ಶಿಂಧೆ, ಸುಬ್ರಹ್ಮಣ್ಯನ್ ಉಪಸ್ಥಿತರಿದ್ದರು. ವಿ.ಎಲ್. ಚಿತ್‌ಕೋಟೆ ಸ್ವಾಗತಿಸಿದರು. ಗುರುನಾಥ ಅಕ್ಕಣ್ಣ ನಿರೂಪಿಸಿದರು. ಕಲ್ಲಪ್ಪ ಕೋಣೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.