ADVERTISEMENT

ಬಳೂತಿ ಜಾಕ್‌ವೆಲ್‌ಗೆ ನೀರು

​ಪ್ರಜಾವಾಣಿ ವಾರ್ತೆ
Published 3 ಮೇ 2012, 7:30 IST
Last Updated 3 ಮೇ 2012, 7:30 IST

ಬಸವನ ಬಾಗೇವಾಡಿ/ಕೊಲ್ಹಾರ: ಕೃಷ್ಣಾ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಬಹುಗ್ರಾಮ ಕುಡಿ ಯುವ ನೀರಿನ ಸರಬರಾಜು ಯೋಜನೆಗೆ ತಾತ್ಕಾಲಿಕವಾಗಿ 10 ಎಚ್‌ಪಿ ನಾಲ್ಕು ಪಂಪುಗಳ ಮೂಲಕ ಬಳೂತಿ ಜಾಕ್‌ವೆಲ್‌ಗೆ ನೀರು ಹರಿಸು ವುದರ ಮೂಲಕ ಕೆಲ ಗ್ರಾಮಗಳಿಗೆ ಬುಧವಾರದಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೃಷ್ಣಾ ಜಲಾಶಯದ ಹಿನ್ನೀರಿನಿಂದ ತಾಲ್ಲೂಕಿನ 36ಹಳ್ಳಿಗಳಿಗೆ ನೀರು ಸರಬರಾಜು ಮಾಡ ಲಾಗುತ್ತಿತ್ತು. ಬರಗಾಲದ ಭೀಕರತೆ ಮತ್ತು ರಾಯಚೂರು ಥರ್ಮಲ್ ಘಟಕಕ್ಕೆ 2000 ಕ್ಯೂಸೆಕ್ಸ್ ನೀರು ಬಿಟ್ಟಿದ್ದರಿಂದ  ಜಲಾಶಯದ ನೀರಿನ ಮಟ್ಟ ಕಡಿಮೆ ಯಾಗಿತ್ತು. ಹೀಗಾಗಿ ತಾಲ್ಲೂಕಿನ 36 ಹಳ್ಳಿಗಳಲ್ಲಿ ಕುಡಿ ಯುವ ನೀರಿನ ಕೊರತೆ ಉಂಟಾಗಿತ್ತು.

ಇದನ್ನರಿತ ಶಾಸಕ ಎಸ್.ಕೆ.ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಭಾನುವಾರ ದಿಂದಲೇ ಪರ್ಯಾಯ ವ್ಯವಸ್ಥೆ ರೂಪಿಸಲಾಯಿತು.  ಅಧಿಕಾರಿಗಳು ಭಾನುವಾರದಿಂದ ಬಳೂತಿಯಲ್ಲಿ ಬೀಡುಬಿಟ್ಟು 36 ಹಳ್ಳಿಗಳಿಗಳಿಗೆ ನೀರಿನ ಕೊರತೆ ಉಂಟಾಗದಂತೆ ಕಾರ್ಯ ಪ್ರವೃತ್ತರಾಗಿದ್ದಾರೆ.

ತಾತ್ಕಾಲಿಕವಾಗಿ ಪಂಪ್‌ಗಳ ಮೂಲಕ ನೀರು ಸರಬರಾಜು ಮಾಡ ಲಾಗುತ್ತ್ದ್ದಿದು  ತೆಲಗಿ ರೈಲು ನಿಲ್ದಾಣದ ಸಮೀಪದಲ್ಲಿರುವ ಜಲ ಶುದ್ಧೀಕರಣ ಘಟಕದಿಂದ ಕೆಲ ಗ್ರಾಮಗಳಿಗೆ ನೀರು ಸರಬರಾಜು  ಮಾಡಲಾಗುತ್ತಿದೆ.
ಆದರೆ ಈಗಿರುವ ಸರಬರಾಜು ತಾತ್ಕಾಲಿಕ ಆಗಿದ್ದು ಶಾಶ್ವತ ಯೋಜನೆ ರೂಪಿಸಲು ಜಲಾಶಯದ ಹಿನ್ನಿರಿನಿಂದ 600 ಮೀಟರ್ ದೂರದ ಬಳೂತಿ ಜಾಕ್‌ವೇಲ್ ವರೆಗೆ ಒಳ ಹರಿವು ಕಾಲುವೆಯನ್ನು ತೊಡಿಸುವ ಕಾಮಗಾರಿ ಬರದಿಂದ ಸಾಗಿದೆ.

ಜಿಲ್ಲಾಧಿಕಾರಿ ಭೇಟಿ:
ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ನೀರು ಸರಬರಾಜು ಅಗುತ್ತಿರುವ ತಾಲ್ಲೂಕಿನ ಬಳೂತಿ ಜಾಕವೇಲ್‌ಗೆ  ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಭೇಟಿ ನೀಡಿ   ನೀರು ಸರಬರಾಜು ಮಾಡುವ ಕುರಿತು ನಡೆದಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಕಾಮಗಾರಿ ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಭಾನುವಾರದಿಂದ 36 ಗ್ರಾಮಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಸಧ್ಯ ಪಂಪ್‌ಗಳ ಮೂಲಕ ನದಿ ನೀರನ್ನು ಜಾಕ್‌ವೆಲ್‌ಗೆ ಹರಿಸಿ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.

ನೀರಿನ ಪ್ರಮಾಣ ಕಡಿಮೆಯಿರು ವುದರಿಂದ ಶಾಶ್ವತ  ಯೋಜನೆಗಾಗಿ ಜಲಾಶಯದ ಹಿನ್ನೀರನ್ನು ಜಾಕ್‌ವೆಲ್‌ವರೆಗೆ ಹರಿಸಲು ಕಾಲುವೆ ತೊಡಿಸಲಾಗುತ್ತಿದೆ. ಅದಕ್ಕೆ ಅಂದಾಜು ರೂ.70 ಲಕ್ಷ ವೆಚ್ಚ ತಗಲುವುದರಿಂದ ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಮುಂದಿನ 3-4 ದಿನಗಳಲ್ಲಿ ಕಾಲುವೆ ತೊಡಿಸುವ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಅದು ಪೂರ್ಣಗೊಂಡ ನಂತರ ಜಾಕವೆಲ್‌ಗೆ ನದಿ ನೀರು ಹರಿದು ಬರುವುದರಿಂದ ನೀರು ಸರಬರಾಜಿನಲ್ಲಿ ತೊಂದರೆ ಉಂಟಾಗದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ, ಜಿ.ಪಂ ಎಂಜಿನಿಯರಿಂಗ್ ವಿಭಾಗದ ಎಇಇ ಎ.ಎಸ್. ಪಾಟೀಲ, ತಹಸೀಲ್ದಾರ ಮಹಾದೇವಪ್ಪ ಮುರಗಿ, ಎಂಜಿನಿಯರ್ ವಿ.ಬಿ. ಗೊಂಗಡಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ದ್ಯಾಮಣ್ಣ ಕಾಡಸಿದ್ದ, ಮಹಮ್ಮದ ಸಾಬ್ ಕೋಲಾರ, ಗೂಳಪ್ಪ ಬೆಲ್ಲದ, ಚಂದು ಪವಾರ, ಮಲ್ಲು ಪವಾರ ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.