ವಿಜಯಪುರ: ತೋಟಗಾರಿಕೆ ಇಲಾಖೆ ವತಿಯಿಂದ ಯಾವುದೇ ಸೌಲಭ್ಯವನ್ನು ಪಡೆಯಲು ನಾಡಕಚೇರಿಗಳ ಮೂಲಕ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ಪಡೆದುಕೊಳ್ಳಲು ತೋಟಗಾರಿಕೆ ಉಪ ನಿರ್ದೇಶಕರು ಕೋರಿದ್ದಾರೆ.
ತೋಟಗಾರಿಕೆ ಇಲಾಖೆ ಯೋಜನೆ ಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಯಾ ಸಾಲಿನಲ್ಲಿ ಋತು ಮಾನಕ್ಕನುಗುಣವಾಗಿ ಬೆಳೆದ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಆರ್.ಟಿ.ಸಿ.ಯಲ್ಲಿ ನಮೂದಿಸುವುದು ಅತ್ಯಗತ್ಯವಾಗಿರುತ್ತದೆ.
ಇದರಿಂದ ತೋಟಗಾರಿಕೆ ಬೆಳೆಗಳ ನಿಖರ ಅಂಕಿ–ಅಂಶ ದೊರೆಯಲಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಾಯವಾಗಲಿದೆ. ಅಲ್ಲದೆ ರೈತರು ಯೋಜನೆಗಳ ಅನುಕೂಲ ಪಡೆಯಲು, ಬೆಳೆ ವಿಮಾ ಯೋಜನೆ, ಸರ್ಕಾರದ ಮಟ್ಟದಲ್ಲಿ ಹೆಚ್ಚಾದ ತೋಟ ಗಾರಿಕೆ ಪ್ರದೇಶ ಮತ್ತು ಉತ್ಪಾದನೆ ಯನ್ನು ದಾಖಲಿಸುವುದರ ಮೂಲಕ ಮಾರುಕಟ್ಟೆಯ ಬೆಲೆ ನಿಯಂತ್ರಣದ ಬಗ್ಗೆ ಕ್ರಮ ವಹಿಸಲು ಅನುಕೂಲವಾಗಲಿದೆ.
ಈ ನಿಟ್ಟಿನಲ್ಲಿ ರೈತರಿಗೆ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ನೀಡಿ, ತದನಂತರ ಆರ್.ಟಿ.ಸಿಯಲ್ಲಿ ದಾಖಲಾ ಗುವಂತೆ ವೆಬ್ ಆಧಾರಿತ ತಂತ್ರಾಂಶ ವನ್ನು ಭೂಮಿ ಉಸ್ತುವಾರಿ ಕೋಶದಿಂದ ಅಭಿವೃದ್ದಿಪಡಿಸಲಾಗುತ್ತದೆ. ಸದರಿ ತಂತ್ರಾಂಶವು ಜಿಲ್ಲೆಯ ಎಲ್ಲ ನಾಡ ಕಚೇರಿಗಳ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಕಾರ್ಯಾಚರಣೆಯಲ್ಲಿದ್ದು, ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರಿಂದ ಅರ್ಜಿಯನ್ನು ತಂತ್ರಾಂಶದ ಮೂಲಕ ಸ್ವೀಕರಿಸಿ ಬೆಳೆದೃಢೀಕರಣ ಪತ್ರ ಪಡೆಯಬಹುದು. ಪ್ರಸಕ್ತ ವರ್ಷದಿಂದ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಎಲ್ಲ ಯೋಜನೆಗಳಡಿ ಕಡ್ಡಾಯವಾಗಿ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ಪಡೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರೈತರು ನಾಡ ಕಚೇರಿಗಳ ಮೂಲಕ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದ್ದು, ವಿವರಗಳಿಗಾಗಿ 08352–-250244 ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.