ADVERTISEMENT

ಮತದಾರರ ಹೆಸರು ಸೇರ್ಪಡೆ ನಾಳೆ ಕೊನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:28 IST
Last Updated 6 ಏಪ್ರಿಲ್ 2013, 5:28 IST

ವಿಜಾಪುರ: ವಿಧಾನಸಭಾ ಚುನಾವಣೆಗೆ ಮತದಾರರ ಹೆಸರು ಸೇರ್ಪಡೆ, ಮಾರ್ಪಾಡು ಹಾಗೂ ವರ್ಗಾವಣೆ, ಭಾವಚಿತ್ರವಿಲ್ಲದವರು ಭಾವಚಿತ್ರ ಸಲ್ಲಿಸಲು ಇದೇ 7 ಕೊನೆಯ ದಿನವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಮತದಾನ ಮಾಡಲು 18 ವರ್ಷ ವಯಸ್ಸು ತುಂಬಿದ ಯುವಕ, ಯುವಕರು ಸೂಕ್ತ ದಾಖಲಾತಿಗಳನ್ನು ಒದಗಿಸಿ ಯಾದಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಬಹುದು. 

ಮತದಾರರು ತಮ್ಮ ಅರ್ಜಿಯನ್ನು ಮತಗಟ್ಟೆ ಅಧಿಕಾರಿಗಳು ಹಾಗೂ ತಹಶೀಲ್ದಾರ ಕಚೇರಿಗೆ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿ ಡಾ.ಬೂದೆಪ್ಪ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.