ADVERTISEMENT

ವರ್ಷಗಳೇ ಕಳೆದರೂ ನಿತ್ಯ ತಪ್ಪದ ನೀರಿನ ಗೋಳಾಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 9:40 IST
Last Updated 16 ಏಪ್ರಿಲ್ 2012, 9:40 IST

ಗೋಟಖಿಂಡ್ಕಿ(ತಾ.ಮುದ್ದೇಬಿಹಾಳ): ಮುದ್ದೇಬಿಹಾಳ ತಾಲ್ಲೂಕಿನ ಬಂಟನೂರ ಗ್ರಾಮ ಪಂಚಾಯಿತಿಯ ಗೋಟಖಿಂಡ್ಕಿಯಲ್ಲಿ 2004-05ರಲ್ಲಿ  ಗ್ರಾಮಸಭೆ ನಡೆದಿತ್ತು. ನೀರಿನ ಬವಣೆಯಿಂದ ಬೇಸತ್ತಿದ್ದ ದಲಿತರ ಕೇರಿಯ ಮಹಿಳೆಯರು `ನೀರು ಕೊಡಿ, ಇಲ್ಲವಾದಲ್ಲಿ ದಾರಿ ಬಿಡೆವು~ ಎಂದು ಖಾಲಿ ಕೊಡ ಪ್ರದರ್ಶನ ಮಾಡಿದ್ದರು. ಸಭೆಗೆ ಬಂದಿದ್ದ ಅಧಿಕಾರಿಗಳಿಗೆ ಘೇರಾವ್ ಹಾಕಿದ್ದರು.

ಈಗ 2012. ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಮಳೆಗಾಲದ ಕೊರತೆಯಿಂದ ಅಂತರ್ಜಲ ಪಾತಾಳ ಕಂಡಿದೆ. ಕುಡಿಯಲು, ನಿತ್ಯ ಬಳಕೆಗೆ, ಜಾನುವಾರುಗಳಿಗೆ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ದೂರದ ತೋಟದ ಭಾವಿಗಳೆದು ತುಂಬಿಕೊಳ್ಳುತ್ತಿದ್ದರು. ತೋಟದ ಮಾಲೀಕರು ಬೈಯ್ಯುವ ಮಾತುಗಳಿಗೆ ನೀರೊಯ್ಯುವ ಜನರು ಕಿವುಡರಾಗಿ ದೈನ್ಯದಿಂದ ನೀರು ಕೊಡಿ~ ಎಂದು ಕೇಳುವ ದೃಶ್ಯ ಕರುಳು ಇರಿಯುತ್ತದೆ.

ಸುಮಾರು 15 ವರ್ಷಗಳ ಹಿಂದೆ ಬಂಟನೂರ ರಸ್ತೆಯ ಹಳ್ಳದ ಪಕ್ಕದ ಮುದಿಗೌಡರ ಹೊಲದಲ್ಲಿ ಸರ್ಕಾರದಿಂದ ರೂ 4.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಭಾವಿಯಲ್ಲಿ ಈಗ ನೀರಿಲ್ಲ. ಜನತೆಗೆ ಅಷ್ಟೋ ಇಷ್ಟೋ ಸಮಾಧಾನ ನೀಡುತ್ತಿದ್ದರು. 30 ಅಡಿ ಆಳದ ಮಠದ ಭಾವಿಯ ತಳದಲ್ಲಿ ಕಾಣುವ ನೀರು ಕೊಡಕ್ಕೆ ಸಿಕ್ಕುತ್ತಿರಲಿಲ್ಲ.

ಕರ್ನಾಟಕ ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಸಂಸ್ಥೆಯ ಜಲನಿರ್ಮಲ ಯೋಜನೆಯಡಿ 10 ವರ್ಷದ ಹಿಂದೆ ರೂ 23 ಲಕ್ಷ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಿದೆ. ಗ್ರಾಮದಲ್ಲಿರುವ ಮೂರು ಸಾವಿರಕ್ಕೂ ಹೆಚ್ಚಿನ ಜನರಿಗೆ ಅಸ್ಕಿ ಮತ್ತು ಬಿಂಜಲಭಾವಿ ರಸ್ತೆಯ 40ರಿಂದ 50 ಮನೆಗಳಿಗೆ ಮಾತ್ರ ನೀರು ಸಿಗುತ್ತಿತ್ತು.

ಕೆಲವರು ನಿಗದಿತ ಅಳತೆಗಿಂತ ಹೆಚ್ಚಿನ ಪೈಪ್ ಹಾಕಿಕೊಂಡಿದ್ದು, ಉಳಿದೆಡೆ ನೀರೆ ಬರುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ಒಂದೇ ಬೋರವೆಲ್‌ನಲ್ಲಿ ನೀರಿಗಾಗಿ ರಾತ್ರಿ ಎರಡರವರೆಗೆ ಮತ್ತೆ ಬೆಳಿಗ್ಗೆ ನಾಲ್ಕರಿಂದ ಜನರ ಗದ್ದಲ, ಸರದಿಗಾಗಿ ಜಗಳ ಮುಂದುವರೆದಿರುತ್ತದೆ.

ಪರಿಶಿಷ್ಟರ ಕಾಲೊನಿಯ ಮನೆಗಳಿಗೆ ಆಧಾರವಾಗಿದ್ದ ಬೋರವೆಲ್‌ನಲ್ಲಿ ಈಗ ನೀರಿಲ್ಲ. ಜನವರಿಯಿಂದಲೇ ಇಲ್ಲಿ ಸಮಸ್ಯೆ ಶುರುವಾಗಿದೆ.  ಗ್ರಾಮದಲ್ಲಿ ಸಾಮರಸ್ಯವಿದ್ದರೂ ಪರಿಶಿಷ್ಟರಿಗೆ ದೇವರ ಭಯ ಕಾಡುತ್ತಿದೆ. ಹೀಗಾಗಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರೂ ಪ್ರಯೋಜನ ಆಗಿಲ್ಲ.

`ಮೊನ್ನೆ ಜನಸ್ಪಂದನ ಹಿನ್ನೆಲೆಯಲ್ಲಿ ಹಿಂದಿನ ದಿನ ಗ್ರಾಮಕ್ಕೆ ಬಂದ ಪಂಚಾಯಿತಿ ಅಧಿಕಾರಿಗಳು ಓಡಾಡಿ ಅಲ್ಲಲ್ಲಿ ಪೈಪ್ ಹಾಕಿ, ನೀರು ಬಿಡುವ ನಾಟಕ ಮಾಡಿದ್ದಾರೆ. ಎರಡು-ಮೂರು ದಿನಕ್ಕೆ ಅರ್ಧ ಗಂಟೆ ನೀರು ಬಿಡ್ತಾರ. ಯಾರಿಗೂ ನೀರು ಸಾಕಾಗಲ್ಲ ಎಂಬುದು ಗ್ರಾಮಸ್ಥರ ಆರೋಪ.

ನೀರಿನ ವ್ಯವಸ್ಥೆ ಕುರಿತು ಸಂಬಂಧಿಸಿದ ಎಂಜಿನಿಯರ್ ಅವರನ್ನು ಮಬಗ್ಗೆ ಈ ಭಾಗದ ಇಂಜಿನಿಯರ್ ಅವರನ್ನು ಮಾತನಾಡಿಸಿದಾಗ,   ಯಾವ ಭಾವಿಯಲ್ಲಿಯೂ ನೀರಿಲ್ಲ. ನೀರಿಗಾಗಿ ಪರ್ಯಾಯವಾಗಿ ಖಾಸಗಿ ಭಾವಿಯಿಂದ ನೀರು ಕೊಡಬೇಕು. ಪೈಪ್ ಸರಬರಾಜಾಗಿಲ್ಲ. ಅಧಿಕಾರಿಗಳು ಏನಾದರೊಂದು ನೆಪ ಹೇಳುತ್ತ ಕಾಲ ತಳ್ಳುತ್ತಿದ್ದಾರೆ. ಇವೆಲ್ಲವುಗಳ ನಡುವೆ ಜನರು ನಿತ್ಯ ನೀರಿಗಾಗಿ ಸಂಕಷ್ಟ ಎದುರಿಸುವುದು ತಪ್ಪುತ್ತಿಲ್ಲ.

ಮಾಹಿತಿಗೆ ಸಂಪರ್ಕಿಸಿ

ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ. ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ.  ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ).  
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.