ADVERTISEMENT

ಸಾಹಿತ್ಯ ಸಮ್ಮೇಳನ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 9:21 IST
Last Updated 21 ಜೂನ್ 2013, 9:21 IST

ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗ ಮಹಾರಾಜರ ಕಮರಿ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇಂಡಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮಳನದಲ್ಲಿ ಕಲಾವಿದರು ಏರ್ಪಡಿ ಸಿದ್ದ ಚಿತ್ರಕಲಾ ಪ್ರದರ್ಶನ ಸಾರ್ವ ಜನಿಕರ ಗಮನ ಸೆಳೆಯಿತು.

ವಿವಿಧ ವಿಷಯಗಳ ಮೇಲೆ ಚಿತ್ರಗಳನ್ನು ರಚಿಸಿದ್ದ ಪ್ರವೀಣ ಕಾಂಬಳೆ, ಆದರ್ಶ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಐ.ಸಿ. ಪೂಜಾರಿ, ಉಪನ್ಯಾಸಕ ಎಸ್.ಎಸ್. ಕೋಲಕಾರ ತಮ್ಮ ಭಾವನೆಗಳನ್ನು ಚಿತ್ರಗಳ ಮೂಲಕ ಬಿಡಿಸಿದ್ದರು.

ಚಿತ್ರಕಲಾ ಪ್ರದರ್ಶನದಲ್ಲಿ ಅನೇಕ ಚಿತ್ರಗಳು ಪ್ರೇಕ್ಷಕರನ್ನು ಸೆಳೆದವು. ಅವು ಗಳಲ್ಲಿ ಒಂದು ರಣಹದ್ದು, ಬೆಳೆಯು ತ್ತಿರುವ ಮರಿಯೊಂದಕ್ಕೆ ಬೇಟೆಯಾ ಡಲು ಹೊಂಚು ಹಾಕುತ್ತಿರುವ ದೃಶೃ ನೋಡುಗರ ಗಮನ ಸೆಳೆಯಿತು.

ಅಕ್ಷರ ಜಾತ್ರೆ, ರಾಷ್ಟ್ರದ ಮಹಾ ಪುರುಷರ ಚಿತ್ರ, ನಿಸರ್ಗದ ಗಮನ ಸೇಳೆಯವ ದೃಶೃ, ಪರಿಸರ ಪ್ರಜ್ಞೆ ಮುಂತಾದ ಚಿತ್ರಗಳನ್ನು ಪ್ರದರ್ಶಸಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಗುರನ ಗೌಡ ಪಾಟೀಲ ಚಿತ್ರ ಕಲಾ ಪ್ರದರ್ಶ ನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಾಹಿತಿ ಚಂದ್ರಶೇಖರ ಪಾಟೀಲ, ಸಮ್ಮಳನದ ಸರ್ವಾಧ್ಯಕ್ಷ              ಎಚ್.ಟಿ. ಪೋತೆ, ಶಾಸಕ ಯಶವಂತ್ರಾ ಯಗೌಡ ಪಾಟೀಲ, ಡಾ, ಸೋಮ ಶೇಖರ ವಾಲಿ,             ಪ್ರೊ,ಎಂ.ಬಿ.ದಿಲ್‌ಶಾದ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಾ, ಕಾಂತು ಇಂಡಿ, ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಸೌಮ್ಯಾ ಪಾಟೀಲ, ಜ್ಯೋತಿ ಕೋಳಿ ಚಿತ್ರ ಪ್ರದರ್ಶನ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.