ADVERTISEMENT

ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ವಿಜಾಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 4:44 IST
Last Updated 10 ಡಿಸೆಂಬರ್ 2013, 4:44 IST

ವಿಜಾಪುರ: ನಾಲ್ಕು ವರ್ಷಗಳ ಹಿಂದೆ ನಗರದ ಟಿಪ್ಪು ಸುಲ್ತಾನ್‌ ಚೌಕ್‌ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಒತ್ತಾಯಿಸಿ ಮಠಾಧೀಶರ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳವರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಶಿರಾತ-–ಎ–-ಮುಸ್ತಖಿಮ್, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡ ಳಿಯ ಸಹಯೋಗದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಟಿಪ್ಪು ಸುಲ್ತಾನ್‌ ಚೌಕ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ‘ಪಾಕಿಸ್ತಾನ ಧ್ವಜ ಹಾರಿಸಿದ ಕಿಡಿಗೇಡಿಗಳನ್ನು ಇಲ್ಲಿಯ ವರೆಗೂ ಬಂಧಿಸದಿರುವುದು ನೋವಿನ ಸಂಗತಿ. ರಾಜಕೀಯ ಮುಖಂಡರೂ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡಕೂಡದು. ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮೌಲಾನಾ ಮೆಹಬೂಬ್ ರಹೆ ಮಾನ್ ಮದನಿ, ‘ನಾವೆಲ್ಲರೂ ಸ್ವಾಮರ ಸ್ಯದಿಂದ ಬದುಕುತ್ತಿದ್ದೇವೆ. ಪಾಕಿಸ ್ತಾನದ ಧ್ವಜ ಪ್ರಕರಣ ಜಿಲ್ಲೆ ಯಲ್ಲಿ ಅಶಾಂತಿಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ಈ ವಿಷಯವನ್ನು ಮೇಲಿಂದ ಮೇಲೆ ಕೆದಕಿ ಸಾಮರಸ್ಯ ಹಾಳು ಮಾಡುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಬೇಗನೆ ಅಪರಾಧಿ ಗಳನ್ನು ಬಂಧಿಸ ಬೇಕು’ ಎಂದರು.

ಮನಗೂಳಿ ಹಿರೇಮಠ ಸಂಸ್ಥಾನದ ಸಂಗನಬಸವ ಸ್ವಾಮೀಜಿ, ‘ಜಗತ್ತಿನಲ್ಲಿ ಭಾರತ ದೇಶ ಶಾಂತಿಪ್ರಿಯ. ಅಶಾಂತಿ ಹಬ್ಬಿಸುವ ಜನರ ಬಗ್ಗೆ ಎಚ್ಚರದಿಂದ ಇರಬೇಕು. ಭಾವುಕರಾಗದೇ ಇಂತಹ ಸಮಸ್ಯೆಗಳ ಕುರಿತು  ಪರಸ್ಪರ ಚರ್ಚಿ ಸಬೇಕು. ಈ ಪ್ರಕರಣದ ತನಿಖೆ ಯಲ್ಲಿ ಪೊಲೀಸ್ ಇಲಾಖೆ ವಿಳಂಬ ಮಾಡಿದ್ದು ಸರಿಯಲ್ಲ’ ಎಂದು ಹೇಳಿದರು.

ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ, ‘ವಿಜಾಪುರ ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಸಮರ್ಥ ಅಧಿಕಾರಿಗಳಿದ್ದರೂ ಪಾಕಿಸ್ತಾನ ಧ್ವಜದ ಪ್ರಕರಣದ ಆರೋಪಿಗಳು ಸಿಗದೆ ಇರುವುದು ನೋವಿನ ಸಂಗತಿ. ಈ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ಒಪ್ಪಿಸಿ ಇತ್ಯರ್ಥಪಡಿಸಬೇಕು’ ಎಂದು ಆಗ್ರಹಿಸಿದರು. ಅಪರಾಧ ತಡೆಗಟ್ಟು ವಲ್ಲಿ ಮತ್ತು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿಫಲಗೊಂಡಿದೆ ಎಂದು ಹೋರಾಟ ಗಾರ ಆನಂದ ಔದಿ ಆಪಾದಿಸಿದರು.

ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠ ಕಲ್ಲಿನಾಥ ದೇವರು, ಬುರಣಾ ಪುರ ಸಿದ್ದಾರೂಢ ಮಠದ ಯೋಗೇಶ್ವರಿ ಮಾತಾ, ಶಿವಬಸವ ಆಶ್ರಮದ ಶಂಭುಲಿಂಗ ಸ್ವಾಮೀಜಿ, ಚಿಕ್ಕಲಕಿಯ ಭಗೀರಥ ಪೀಠದ ಶಿವಾನಂದ ಶಿವಾ ಚಾರ್ಯರು, ಸುರೇಶ ಗೊಣಸಗಿ, ಬಸೀರ್‌ ಲಾಹೋರಿ, ಕೆಂಚಪ್ಪ ಬಿರಾ ದಾರ, ಬಂದೇನವಾಜ ಮಹಾಬರಿ, ಅಡಿವೆಪ್ಪ ಸಾಲಗಲ್‌, ಅಶೋಕ ಚಲ ವಾದಿ, ಅಜೀಂ ಇನಾಮದಾರ, ಡಾ.ದಸ್ತಗೀರ ಮುಲ್ಲಾ, ಕಮಾಲಸಾಬ್ ಇನಾಮದಾರ, ರಮಾನಂದ ಸಾಗರ ಮಾತನಾಡಿದರು.

ಜಾವೀದ್‌ ಜಮಾದಾರ, ವಸುಜಮಾ ಹತ್ತರಕಿಹಾಳ, ರಫೀಕ್‌ ಟಪಾಲ, ರಜಾಕ್‌ ಹೊರ್ತಿ, ಪ್ರಭುಗೌಡ ಪಾಟೀಲ, ಆನಂದ ಧುಮಾಳೆ, ರವೂಫ್‌ಶೇಖ, ಅನುರಾಧ ಕಲಾಲ, ನಬಿಲಾಲ್ ಕರಜಗಿ, ಅಲ್ತಾಫ್‌ ಇಟಗಿ, ಆಶಾ ಕಟ್ಟಿಮನಿ, ರಜಾಕ ಕುಮಸಗಿ, ರೇಣುಕಾ ಕಲಾಲ, ವಿಜಯಕುಮಾರ ಘಾಟಗೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.