ADVERTISEMENT

ಮೂವರು ಸುಲಿಗೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 16:22 IST
Last Updated 23 ಅಕ್ಟೋಬರ್ 2020, 16:22 IST
ವಿಜಯಪುರ ಗ್ರಾಮೀಣ ಠಾಣೆ ಪೊಲೀಸರಿಗೆ ಸೆರೆ ಸಿಕ್ಕಿರುವ ಸುಲಿಗೆಕೋರು
ವಿಜಯಪುರ ಗ್ರಾಮೀಣ ಠಾಣೆ ಪೊಲೀಸರಿಗೆ ಸೆರೆ ಸಿಕ್ಕಿರುವ ಸುಲಿಗೆಕೋರು   

ವಿಜಯಪುರ: ನಗರದ ಗಚ್ಚಿನಕಟ್ಟಿ ಕಾಲೊನಿಯ ಔಷಧ ಸಸ್ಯ ಮಾರಾಟಗಾರ ಅಪ್ಪಸಾಹೇಬ ಬಗಡೆ ಎಂಬುವವರಿಗೆ ಜೀವ ಬೆದರಿಕೆ ಒಡ್ಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನೂರಿನ ಮುರಿಗೆಪ್ಪಬೆಳ್ಳುಂಡಗಿ ಮತ್ತುಬಸವರಾಜ ಬೆಳ್ಳುಂಡಗಿ ಹಾಗೂಮಕಣಾಪುರದದೇವೇಂದ್ರ ಒಡೆಯರ ಬಂಧಿತ ಸುಲಿಗೆಕೋರರಾಗಿದ್ದಾರೆ.

ಪ್ರಕರಣದ ವಿವರ:ಕಳೆದಅಕ್ಟೋಬರ್‌ 15ರಂದು ಆರೋಪಿಗಳು ಬಗಡೆ ಅವರಿಗೆ ಫೋನ್‌ ಮಾಡಿ, ಸಸಿ ಖರೀದಿ ಮಾಡುವುದಾಗಿ ಹೇಳಿಶಿರನಾಳ–ಬಬಲಾದಿ ರಸ್ತೆಗೆ ಕರೆಯಿಸಿಕೊಂಡಿದ್ದಾರೆ. ಬಳಿಕ ‘ನಾವು ಧರ್ಮರಾಜ ಚಡಚಣ ಕಡೆಯ ಸಂಬಂಧಿಗಳು, ನೀನು ಎಷ್ಟು ಜನರಿಗೆ ಮೋಸ ಮಾಡಿದ್ದೀಯಾ? ನೀನು ಒಬ್ಬ ಹೆಣ್ಣಮಗಳಿಗೆ ನಿನ್ನ ಆಫೀಸ್‌ನಲ್ಲಿ ಇಟ್ಟು ಕೊಂಡಿದ್ದೀಯಾ, ನಿನಗೆ ಕೊಲೆ ಮಾಡಿ ಹೊಳೆಯಲ್ಲಿ ಒಗೆಯುತ್ತೇವೆ’ ಎಂದು ಬೆದಿಕೆ ಒಡ್ಡಿದ್ದಾರೆ.

ADVERTISEMENT

‘ನಿನಗೆ ಬಿಡಬೇಕಾದರೆ ₹ 1.20 ತರೆಯಿಸಿಕೊಡು’ ಎಂದು ಹೆದರಿಸಿ ಬಗಡೆ ಕಡೆಯಿಂದ ಒಟ್ಟು ₹1.37 ಲಕ್ಷ ಹಾಗೂ ₹ 10 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಬಗಡೆ ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.

ವಿಜಯಪುರ ಗ್ರಾಮೀಣಸಿಪಿಐ ಮಹಾಂತೇಶ ದಾಮಣ್ಣವರ ನೇತೃತ್ವದಲ್ಲಿ ಪಿಎಸ್‍ಐ ವಿಜಯಪುರ ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ಆನಂದ ಠಕ್ಕಣ್ಣವರ, ಆರ್.ಎ.ದಿನ್ನಿ,ಸಿಬ್ಬಂದಿ ಎಂ.ಎನ್. ಮುಜಾವರ, ಗುರು ಹಡಪದ, ಎಲ್.ಎಸ್. ಹಿರೆಗೌಡರ, ಆರ್.ಡಿ.ಅಂಜುಟಗಿ, ಪರಶುರಾಮ ವಾಲಿಕಾರ, ರವಿ.ನಾಟಿಕಾರ, ಐ.ವೈ.ದಳವಾಯಿ, ಎಸ್.ಹೆಚ್.ಡೊಣಗಿ, ಎಸ್.ಆರ್.ಪೂಜಾರಿ ಕಾರ್ಯಾಚರಣೆ ನಡೆಸಿಸುಲಿಗೆಕೋರರನ್ನು ಬಂಧಿಸಿದ್ದಾರೆ.

ಆರೋಪಿಗಳು ಸುಲಿಗೆ ಮಾಡಿದ್ದ ₹1.37 ಲಕ್ಷ, ಮೊಬೈಲ್ ಹಾಗೂ ಒಂದು ಬೈಕ್‌ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.