ತಾಳಿಕೋಟೆ: ಇಲ್ಲಿನ ಪಟ್ಟಣದ ಜನರಿಗೆ ಸರಬರಾಜು ಆಗಬೇಕಿದ್ದ ಶುದ್ಧ ಕುಡಿಯುವ ನೀರು ಸಿಬ್ಬಂದಿ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ.
ಶುದ್ಧೀಕರಣ ಘಟಕದಲ್ಲಿ ನೀರು ಸಂಸ್ಕರಿಸಿದ ಬಳಿಕ ಅದನ್ನು ಓವರ್ ಹೆಡ್ ಟ್ಯಾಂಕ್‌ಗೆ ಏರಿಸಿ ಅಲ್ಲಿಂದ ಜನತೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಟ್ಯಾಂಕ್ ತುಂಬಿದರೂ ಬಂದ್ ಮಾಡದೇ ಇರುವುದರಿಂದ ಐದಾರು ದಿನಗಳಿಂದ ನೀರು ನೆಲ ಸೇರುತ್ತಿದೆ. ಈ ಕುರಿತು ಹಲವು ಬಾರಿ ವಿಡಿಯೊ ಸಹಿತ ಪುರಸಭೆ ಮುಖ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ತಿಂಗಳಲ್ಲಿ ಕನಿಷ್ಠ ಮೂರುನಾಲ್ಕು ಬಾರಿ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ.
ಇದು ಸೊಳ್ಳೆಗಳ ಹುಟ್ಟುವಿಕೆಗೂ ಕಾರಣವಾಗುತ್ತಿದೆ. ಸುತ್ತ ಕಸದ ರಾಶಿಯೂ ಬೀಳುತ್ತಿದೆ. ಇದನ್ನು ಸ್ವಚ್ಛಗೊಳಿಸಬೇಕು.
ಟ್ಯಾಂಕ್ ಸುತ್ತ ನೀರು ನಿಂತು ಕೆರೆಯಾಗಿ ಪರಿಣಮಿಸಿದೆ. ಸುಮಾರು 100 ಮೀಟರ್ ವರೆಗೂ ನೀರು ವ್ಯಾಪಿಸುತ್ತದೆ. ಇದಕ್ಕಾಗಿ ವ್ಯಯವಾಗುವ ಜನರ ತೆರಿಗೆ ಹಣ, ವಿದ್ಯುತ್ ಉಳಿಕೆಯಾಗಬೇಕು.
ಪರಪ್ಪ ಸಜ್ಜನ, ಎ.ಜಿ.ದೇಶಪಾಂಡೆ, ಸ್ಥಳೀಯ ನಿವಾಸಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.