ಚಡಚಣ: ಪಟ್ಟಣದ ಆರಾಧ್ಯದೇವ ಬ್ರಹ್ಮದೇವರ ಜಾತ್ರೆಯು ಪ್ರತಿ ವರ್ಷದಂತೆ ಶ್ರಾವಣ ಮಾಸದ ಮೂರನೇಯ ಸೋಮವಾರದಂದು ವೈಭವದಿಂದ ಜರುಗಿತು.
ಮಧ್ಯಾಹ್ನ ಬ್ರಹ್ಮದೇವರ ದೇವಸ್ಥಾನದಿಂದ ಹೋರ ಪಲ್ಲಕ್ಕಿ ಉತ್ಸವವು ಸಂಗಮೇಶ್ವರ ದೇವಾಲಯದ ಮುಂಭಾಗದ ಎದುರಿನ ವಿಶಾಲಾದ ಹಳ್ಳದ ಮೈದಾನಕ್ಕೆ ತಲುಪಿತು. ಈ ಉತ್ಸವದಲ್ಲಿ ಸಾರವಾಡದ ಗೊಂಬೆಕುಣಿತ, ಲೇಜಿಮ ಕುಣಿತ, ಲಂಬಾಣಿನೃತ್ಯ, ವಿವಿಧ ವಾದ್ಯಗಳಗಳು ಪಾಲ್ಗೊಂಡಿದ್ದವು.
ನಂತರ ಜರುಗಿದ ಸ್ಥಳಿಯ ವೀರಭದ್ರೇಶ್ವರ, ಶಂಕರಲಿಂಗ, ಪರಮಾನಂದ ದೇವರು, ಶಿರಾಡೋಣದ ಬೀರಲಿಂಗೇಶ್ವರ, ಮಾಳಿಂರಾಯ, ಕಂಠಿಸಿದ್ದ, ಲಕ್ಕಮ್ಮದೇವಿ, ಶೀಲವಂತಿದೇವಿ ಹೀಗೆ 12 ಪಲ್ಲಕ್ಕಿಗಳ ಭವ್ಯ ಭೇಟಿ ಕಾರ್ಯಕ್ರಮವನ್ನು ಭಕ್ತರು ಕಣ್ತುಂಬಿಸಿಕೊಂಡರು.
ಹರಕೆ ಹೊತ್ತ ಭಕ್ತರು ಪಲ್ಲಕ್ಕಿಗಳ ಮೇಲೆ ತೂರಿದ ಭಂಡಾರ ಬಾನೆತ್ತರದಲ್ಲಿ ಚಿತ್ತಾರ ಮೂಡಿಸಿದರೆ, ಹಳ್ಳದಲ್ಲಿನ ನೀರು ಹಳದಿಯಮಹವಾಗಿತ್ತು. ವರುಣನ ಅರ್ಭಟವೂ ಜೋರಾಗಿತ್ತು.ಇದನ್ನು ಲೆಕ್ಕಿಸದೇ ಮಹಿಳೆಯರು, ಚಿಣ್ಣರು, ಪುರುಷರು ಭೇಟಿ ವೀಕ್ಷಿಸಿ ಸಂಭ್ರಮಿಸಿದರು. ಭೇಟಿ ನಂತರ ಪೂಜಾರಿಗಳ ಹೇಳಿಕೆಗಳು ಜರುಗಿದವು. ನಂತರ ಸುಪ್ರಸಿದ್ದ ಡೊಳ್ಳಿನ ಪದಗಳ ಹಾಡಿಕೆ ಕಾರ್ಯಕ್ರಮ ಜರುಗಿತು. ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.