ವಿಜಯಪುರ: ‘ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರು ಭಯಭೀತರಾಗಬಾರದು’ ಎಂದು ಬ್ಯಾಂಕ್ ತಿಳಿಸಿದೆ.
‘ಬ್ಯಾಂಕಿನ ವಶದಲ್ಲಿರುವ ಚಿನ್ನವನ್ನು ಸಮಗ್ರ ಪಾಲಿಸಿಯ ಅಡಿಯಲ್ಲಿ ಸಂಪೂರ್ಣವಾಗಿ ವಿಮೆ ಮಾಡಲಾಗಿದೆ. ಕೆನರಾ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ತಿಳಿಸಿದೆ.
‘ಪೊಲೀಸ್ ತನಿಖೆಗಳು ತ್ವರಿತ ಮತ್ತು ಪ್ರಗತಿಯಲ್ಲಿವೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಗ್ರಾಹಕರ ನಂಬಿಕೆ ನಮ್ಮ ಮೊದಲ ಆದ್ಯತೆ ಆಗಿದೆ. ಬ್ಯಾಂಕ್ ತನ್ನ ಗ್ರಾಹಕರ ಸ್ವತ್ತುಗಳ ರಕ್ಷಕನಾಗಿದೆ ಮತ್ತು ಎಲ್ಲಾ ಬಾಧಿತ ಗ್ರಾಹಕರ ಹಿತಾಸಕ್ತಿಯನ್ನು ಸೂಕ್ತವಾಗಿ ರಕ್ಷಿಸಲಾಗುತ್ತದೆ. ಗ್ರಾಹಕರ ವಿರುದ್ಧ ಏನೂ ನಡೆಯುವುದಿಲ್ಲ’ ಎಂದು ಬ್ಯಾಂಕಿನ ಪ್ರಕಟಣೆಯಲ್ಲಿ ಭರವಸೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.