ಆಲಮೇಲ: ‘ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತರುವ ಮೂಲಕ ಬಡವರ ಹಸಿವು ಮುಕ್ತಗೊಳಿಸಿರುವ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಂಡಿ ರಸ್ತೆಯ ಯುಕೆಪಿ ಕ್ಯಾಂಪಿನ ಆವರಣದ ತಹಶೀಲ್ದಾರ್ ಕಚೇರಿ ಹತ್ತಿರ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ಈ ಯೋಜನೆಯನ್ನು ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಸಿದ್ದರಾಮಯ್ಯನವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು ಪುನಃ ಯೋಜನೆ ಆರಂಭಿಸಿ ಬಡವರಿಗೆ ಅನುಕೂಲ ಒದಗಿಸಿದೆ’ ಎಂದರು.
‘ಆಲಮೇಲದ ಬಹುದಿನಗಳ ಕನಸಾದ ತೋಟಗಾರಿಕೆ ಕಾಲೇಜು ಮತ್ತು ಕಡಣಿ ಬ್ರೀಜ್ ನಿರ್ಮಾಣ ಕಾಮಗಾರಿಗೆ ಎರಡ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಶಾಸಕರ ವಿಶೇಷ ಅನುದಾನದಲ್ಲಿ ₹50 ಕೋಟಿಯನ್ನು ಸಿಂದಗಿ ಕ್ಷೇತ್ರಕ್ಕೆ ನೀಡಿದ್ದು, ಅದರಲ್ಲಿ ಆಲಮೇಲ ಪಟ್ಟಣಕ್ಕೆ ಬಹುತೇಕ ಅನುದಾನ ನೀಡುವ ಮೂಲಕ ಅಭಿವೃದ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಜಿಲ್ಲಾ ಯೋಜಾನಾಧಿಕಾರಿ ಸೌದಾಗರ, ತಹಶೀಲ್ದಾರ್ ಕೆ. ವಿಜಯಕುಮಾರ ಮಾತನಾಡಿದರು.
ಅಳ್ಳೋಳ್ಳಿಮಠದ ಶ್ರೀಶೈಲಯ್ಯ ಸ್ವಾಮೀಜಿ, ಅಧಿಕಾರಿ ವಿದ್ಯಾಧರ ನ್ಯಾಮಗೊಂಡ, ಪಟ್ಟಣ ಪಂಚಾಯಿತಿ ಇಒ ಸುರೇಶ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.