ADVERTISEMENT

ಸಿಂದಗಿ | ತಾಯಿ, ಪುತ್ರಿ ಕೊಲೆ: ಮರ್ಯಾದೆಗೇಡು ಹತ್ಯೆ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 17:50 IST
Last Updated 3 ಜುಲೈ 2025, 17:50 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಸಿಂದಗಿ(ವಿಜಯಪುರ ಜಿಲ್ಲೆ): ತಾಲ್ಲೂಕಿನ ಬೆನಕೊಟಗಿ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದ ಬಗ್ಗೆ ದೂರು ದಾಖಲಾಗಿದೆ. ಶಕುಂತಲಾ ನಾನಾಗೌಡ ಪಾಟೀಲ (22) ಮತ್ತು ಅವರ ಪುತ್ರಿ ಆರಾಧ್ಯಾ ನಾನಾಗೌಡ ಪಾಟೀಲ (1 ವರ್ಷ) ಮೃತರು.

ADVERTISEMENT

‘ಶಕುಂತಲಾ ಅವರ ಪತಿ ನಾನಾಗೌಡ ಪಾಟೀಲ, ಅತ್ತೆ ಸಿದ್ದಮ್ಮ ಮತ್ತು ಮಾವ ಬೋಗಪ್ಪಗೌಡ ಸೇರಿ  ಕೊಲೆ ಮಾಡಿದ್ದಾರೆ ಎಂದು ಶಕುಂತಲಾ ಅವರ ತಾಯಿ ಲಕ್ಷ್ಮೀ ದುರ್ಗೇಶ ಮಾದರ ಎಂಬುವರು ದೂರು ನೀಡಿದ್ದರು. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಂದಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಮಾದರ ಜಾತಿಯವರು ಎಂಬುದು ಗೊತ್ತಿದ್ದರೂ ನನ್ನ ಪುತ್ರಿ ಶಕುಂತಲಾಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ನಾನಾಗೌಡ ಪಾಟೀಲ ಎರಡು ವರ್ಷಗಳ ಹಿಂದೆ ಪ್ರೀತಿಸಿ, ಮದುವೆಯಾಗಿದ್ದ. ಮನೆಯಲ್ಲಿ ಆಕೆಗೆ ಜಾತಿ ಹೆಸರಿನಲ್ಲಿ ನಿಂದಿಸಿ, ಮೂವರು ಕಿರುಕುಳ ನೀಡುತ್ತಿದ್ದರು’ ಎಂದು ಲಕ್ಷ್ಮೀ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.