ADVERTISEMENT

‍‘ಸೌಹಾರ್ದದಿಂದ ಹಬ್ಬದ ಮೌಲ್ಯ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 16:04 IST
Last Updated 4 ಜೂನ್ 2025, 16:04 IST
ಕೊಲ್ಹಾರ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಬಕ್ರೀದ್ ಪ್ರಯುಕ್ತ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಪಿಎಸ್ಐ ಎಂ.ಬಿ. ಬಿರಾದಾರ ಮಾತನಾಡಿದರು
ಕೊಲ್ಹಾರ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಬಕ್ರೀದ್ ಪ್ರಯುಕ್ತ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಪಿಎಸ್ಐ ಎಂ.ಬಿ. ಬಿರಾದಾರ ಮಾತನಾಡಿದರು   

ಕೊಲ್ಹಾರ: ‘ಸಮಾಜದಲ್ಲಿ ಎಲ್ಲ ಧರ್ಮದವರು ಪರಸ್ಪರರನ್ನು ಗೌರವದಿಂದ ಕಂಡಾಗ ಹಬ್ಬಗಳ ಮೌಲ್ಯ ಹೆಚ್ಚುತ್ತದೆ’ ಕರ್ನಾಟಕ ರಕ್ಷಣಾ ವೇದಿಕೆಯ ರವಿ ಗೊಳಸಂಗಿ ಮಾತನಾಡಿದರು.

ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಬಕ್ರೀದ್ ಪ್ರಯುಕ್ತ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಿಎಸ್ಐ ಎಂ.ಬಿ. ಬಿರಾದಾರ, ಯಾವ ಧರ್ಮ ಗ್ರಂಥಗಳೂ ಕೆಟ್ಟ ಆಚಾರ ವಿಚಾರಗಳನ್ನು ತಿಳಿಸುವುದಿಲ್ಲ. ಆದ್ದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಹಬ್ಬವನ್ನು ಆಚರಿಸಿದರೆ ಶಾಂತಿ ನೆಮ್ಮದಿ ದೊರೆಯುತ್ತದೆ’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ. ಪಕಾಲಿ, ಜಿಲ್ಲಾ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಹನೀಫ್ ಮಕಾನದಾರ, ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಪಟ್ಟಣ ಪಂಚಾಯಿತಿ ಸದಸ್ಯರಾದ, ತೌಶೀಪ ಗಿರಗಾಂವಿ, ಬನಪ್ಪ ಬಾಲಗೊಂಡ, ಎಂ.ಆರ್. ಕಲಾದಗಿ, ದಶರಥ ಈಟಿ, ಯಮನೂರಿ ಮಾಕಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.