ADVERTISEMENT

ಆರೋಗ್ಯ ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 14:18 IST
Last Updated 28 ಜುಲೈ 2020, 14:18 IST

ಸಿಂದಗಿ(ವಿಜಯಪುರ): ಕರ್ತವ್ಯ ಲೋಪ ಆರೋಪದ ಮೇಲೆ ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದ ನಾಲ್ಕು ಸಿಬ್ಬಂದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಡಾ. ರುಕ್ಸಾನಾ ಬೇಗಂ, ಶುಶ್ರೂಷಕಿ ಲಕ್ಷ್ಮೀ ಪಾಟೀಲ, ಫಾರ್ಮಸಿ ಅಧಿಕಾರಿ ಎನ್.ಬಿ.ಪಾಟೀಲ, ‘ಡಿ’ ದರ್ಜೆ ಸಿಬ್ಬಂದಿ ಮಡಿವಾಳ ಅಖಂಡಳ್ಳಿ ಕೆಲಸದ ಸಂದರ್ಭದಲ್ಲಿ ಗೈರು ಹಾಜರಿದ್ದರಿಂದ ಅಮಾನತು ಮಾಡಲಾಗಿದೆ.

ತಿಳಗೂಳ ಗ್ರಾಮದ ಕಾಳಪ್ಪ ಬಸ್ತಿಹಾಳ (22) ಅವರನ್ನು ಹಾವು ಕಚ್ಚಿದ್ದರಿಂದ, ತುರ್ತು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಬಂದರೆ ಈ ಸಿಬ್ಬಂದಿ ಇರಲಿಲ್ಲ. ಕಾಳಪ್ಪ ಅವರಿಗೆ ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಈ ಬಗ್ಗೆ ತನಿಖೆ ನಡೆಸಿದಾಗ ಸಿಬ್ಬಂದಿ ಕರ್ತವ್ಯ ಲೋಪವಾಗಿದ್ದು ಒಪ್ಪಿಕೊಂಡಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಇಂಗಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.