ADVERTISEMENT

ಕೋವಿಡ್ ಆರೈಕೆ ಕೇಂದ್ರವಾದ ಜೈನ್ ಕಾಲೇಜ್‍

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹಕಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 15:57 IST
Last Updated 28 ಏಪ್ರಿಲ್ 2021, 15:57 IST
ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿರುವ ವಿಜಯಪುರದ ಜೈನ್ ಕಾಲೇಜ್‍ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ ಪರಿಶೀಲಿಸಿದರು
ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿರುವ ವಿಜಯಪುರದ ಜೈನ್ ಕಾಲೇಜ್‍ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ ಪರಿಶೀಲಿಸಿದರು   

ವಿಜಯಪುರ: ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ಹಾಗೂ ಜೈನ್ ಫೌಂಡೇಶನ್ ಸಹಭಾಗಿತ್ವದಲ್ಲಿ ನಗರದ ಸೊಲ್ಲಾಪುರ ರಸ್ತೆಯ ಜೈನ್ ಕಾಲೇಜ್‍ ಅನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

ನಗರದ ಕೋವಿಡ್ ರೋಗಿಗಳಿಗಾಗಿ ಜೈನ್ ಕಾಲೇಜ್‍ ಅನ್ನು ಮೀಸಲಿಟ್ಟು, ಅಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಕೋವಿಡ್ ಕೇರ್ ಸೆಂಟರ್ ಶುಕ್ರವಾರದಿಂದ ಕಾರ್ಯಾರಂಭಗೊಳ್ಳಲಿದ್ದು, ಸಿದ್ಧೇಶ್ವರ ಸಂಸ್ಥೆ ವತಿಯಿಂದ ಕಾಟ್‌ ಮತ್ತು ಬೆಡ್‍ಗಳನ್ನು ಹಾಕಲಾಗಿದೆ. ಸಿದ್ಧ ಸಿರಿ ಸೌಹಾರ್ದ ಸಹಕಾರಿ ಸಂಘದಿಂದ ರೋಗಿಗಳಿಗೆ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ ಬಿಸ್ಕೇಟ್ ಮತ್ತು ರಾತ್ರಿ ಊಟ ಮತ್ತು ಹಣ್ಣು ಹಂಪಲಗಳ ವಿತರಣೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ADVERTISEMENT

ಕೋವಿಡ್ ಕೇರ್ ಸೆಂಟರ್‌ ಕಾರ್ಯಕ್ಕೆ ಜೈನ್ ಫೌಂಡೇಶನ್‌ಶಾಂತಿಲಾಲ್ ಜೈನ್ ಕಟ್ಟಡವನ್ನು ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಸೆಂಟರ್‌ಗೆ ಬರುವ ರೋಗಿಗಳಿಗೆ ವಾಹನ ವ್ಯವಸ್ಥೆಯ ಜೊತೆಗೆ ನುರಿತ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸೆಸ್ ಕೇಂದ್ರದಿಂದ ಆಕ್ಷಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.